ಧನುರ್ಮಾಸದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಬೆಳಗಿನ ಜಾವ ಪೂಜೆ ನಡೆಯುವುದರಿಂದ ಹೊಸ ವರ್ಷದ ಮೊದಲ ದಿನ ಮುಂಜಾನೆಯೇ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದು ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವರು ಮಕ್ಕಳ ಶಿಕ್ಷಣ, ಉದ್ಯೋಗ, ಗೃಹ ನಿರ್ಮಾಣ, ಆಸ್ತಿ ಖರೀದಿ, ವಾಹನ ಖರೀದಿ, ವಿವಾಹ, ವೇತನ ಬಡ್ತಿ ಹೀಗೆ ನಾನಾ ಬೇಡಿಕೆ ಈಡೇರಿಕೆಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಇನ್ನೂ ಕೆಲವರು ಹೊಸ ಸಂಕಲ್ಪಗಳನ್ನು ಮಾಡಿಕೊಂಡರು. ಹೊಸ ವರ್ಷಕ್ಕೆ ಹೊಸ ಕಾರು, ಸ್ಕೂಟರ್ ಖರೀದಿಸಿದವರು ದೇವಾಲಯಗಳಲಿಗೆ ತೆರಳಿ ವಾಹನಗಳಿಗೆ ಪೂಜೆ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.