ದಂಪತಿ ಸಾವಿಗೆ ಹೊಸ ತಿರುವು / ANEKAL

ದೀಪಾಂತ ಸಬರ ಮತ್ತು ಪತ್ನಿ ಮಂಜುಳಾ ಸಬರ
ದೀಪಾಂತ ಸಬರ ಮತ್ತು ಪತ್ನಿ ಮಂಜುಳಾ ಸಬರ
Published on
ಆನೇಕಲ್​ : ಪತಿ&ಪತ್ನಿ ನಡುವೆ ಗಲಾಟೆ ನಡೆದು ಪತ್ನಿಯನ್ನು ಕೊಲೆ ಮಾಡಿ ಪತಿ ನೇಣಿಗೆ ಶರಣಾಗಿದ್ದ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸೂರ್ಯನಗರ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಇತ್ತೀಚೆಗೆ ಒಡಿಶಾ ಮೂಲದ ದೀಪಾಂತ ಸಬರ(31) ಮತ್ತು ಆತನ ಪತ್ನಿ ಮಂಜುಳಾ ಸಬರ(27) ಮನೆಯಲ್ಲಿ ಮೃತಪಟ್ಟಿದ್ದರು.
ಪ್ರಾಥಮಿಕವಾಗಿ ಪತ್ನಿಯನ್ನು ಕೊಲೆ ಮಾಡಿದ ಪತಿ, ಬಳಿಕ ನೇಣಿಗೆ ಶರಣಾಗಿರಬಹುದು ಎಂದು ದೂರು ದಾಖಲಾಗಿತ್ತು. ಆದರೆ, ತನಿಖೆಯ ವೇಳೆ ದೀಪಾಂತ ಸಬರ ಬರೆದಿದ್ದ ಡೆತ್​ ನೋಟ್​ ಜತೆಗೆ ಮೊಬೈಲ್​ನಲ್ಲಿ ಪತ್ನಿಯ ಹಣೆಗೆ ತಿಲಕ ಇಟ್ಟು ಆತ್ಮಹತ್ಯೆಗೆ ಶರಣಾಗುತ್ತೇನೆ ಎನ್ನುವ ಎರಡು ವಿಡಿಯೋ ಮಾಡಿರುವುದು ಬೆಳಕಿಗೆ ಬಂದಿದೆ.
ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಾಂತ ಸಬರ, ಮಂಜುಳಾ ಅವರನ್ನು ಎರಡನೇ ಮದುವೆ ಆಗಿದ್ದ. ಗುರುವಾರ ರಾತ್ರಿ ಇಬ್ಬರು ಮೃತಪಟ್ಟಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಡೆತ್​ ನೋಟ್​ ಹಾಗೂ ಮೊಬೈಲ್​ನಲ್ಲಿ ಎರಡು ವಿಡಿಯೋ ಸಿಕ್ಕಿವೆ. 
ಅಂತೆಯೇ, ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಶವವನ್ನು ಸೀರೆಯಿಂದ ಕೆಳಗಿಳಿಸಿ ಕಣ್ಣೀರು ಹಾಕುತ್ತಾ ಹಣೆಗೆ ಕುಂಕುಮ ಇಡುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಜತೆಗೆ "ಮಂಜುಳಾ ನನ್ನ ಎರಡನೇ ಹೆಂಡತಿ, ಅವಳನ್ನು ದೇವಸ್ಥಾನದಲ್ಲಿ ಮದುವೆಯಾದೆ, ನಮ್ಮ ತಪು$್ಪ ತಿಳಿವಳಿಕೆಯಿಂದ ನಾವು ಜಗಳವಾಡಿದ್ದೇವೆ. ಈ ವೇಳೆ ಅವಳು ಆತ್ಮಹತ್ಯೆ ಮಾಡಿಕೊಂಡಳು. ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ಇಲ್ಲಿ ನನ್ನ ಕುಟುಂಬ ಅಥವಾ ಅವಳ ಕುಟುಂಬ ಸದಸ್ಯರ ತಪ್ಪಿಲ್ಲ. ಅವಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದೆ. ನನಗೆ ಬೇರೆ ದಾರಿ ಇಲ್ಲ. ಆದ್ದರಿಂದ ನಾನು ಅವಳೊಂದಿಗೆ ಹೋಗುತ್ತೇನೆ. ಸಂಜೀವ್​ ದಯವಿಟ್ಟು ನಿಮ್ಮ ಸಹೋದರಿಯನ್ನು ಕ್ಷಮಿಸಿ. ಮೊದಲ ಹೆಂಡತಿ ತುಂಬ ಒಳ್ಳೆಯವಳು. ಇದು ನನ್ನ ಕೊನೆಯ ವಿಡಿಯೋ ಮತ್ತು ನಾನು ಹೋಗುತ್ತಿದ್ದೇನೆ ಬಾಯ್​... ಬಾಯ್​... ' ಎಂಬ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 
ಇನ್ನೊಂದರಲ್ಲಿ "ಇಂದಿನಿಂದ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಮಂಜುಳಾ ಸಬರ್​ ಅವರನ್ನು ಪ್ರೀತಿಸುತ್ತಿದ್ದೆ. ನಿನ್ನೆ ರಾತ್ರಿ ಜಗಳವಾಯಿತು ಮತ್ತು ರಾತ್ರಿ ಒಂದು ಗಂಟೆಗೆ ಅವಳು ಸೀರೆಯಿಂದ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ನನ್ನ ಪ್ರಾಣವನ್ನು ನೀಡುತ್ತೇನೆ. ತಾರಾಮಣಿ ದಯವಿಟ್ಟು ನನ್ನ ಮಕ್ಕಳನ್ನು ನೋಡಿಕೊಳ್ಳಿ. ಕ್ಷಮಿಸಿ ಅಮ್ಮ&ಅಪ್ಪ' ಎಂದು ವಿಡಿಯೋ ಮಾಡಲಾಗಿದೆ. ಸೂರ್ಯ ನಗರ ಪೊಲೀಸರು ಇಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ದೂರು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net