ರಾಜ್ಯಕ್ಕೆ 6ನೇ ಸ್ಥಾನ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪ್ರಿಯಾಂಕ್ ದೊರೆಗೆ 25,000 ರೂ., 7ನೇ ರ್ಯಾಂಕ್ ಪಡೆದ ಹೀತಿಕಾ ಗಾಂಧಿಗೆ 20,000 ರೂ., 9ನೇ ರ್ಯಾಂಕ್ ಪಡೆದ ಶ್ರೇಯಾಂಕ್ ಕಾಟೇಕರ್ಗೆ 15,000 ರೂ., 10ನೇ ರ್ಯಾಂಕ್ ಪಡೆದ ಅಧಿತಿಗೆ 10,000 ರೂ., ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೆ ಪ್ರಥಮ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಧುರ ಮುಡಾಡಗೆ 5000 ರೂ., ಆತಿಶಕುಮಾರ ನರಸಾಲೆಗೆ 3000 ರೂ., ದೇವಶ್ರೀ ರಸಾಳಕರ್ಗೆ 2000 ರೂ.ನಗದು ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಸಂತೋಷ ಹಿರೇಮಠ ಅವರಿಗೆ ರೋಲಿಂಗ್ ಟ್ರೋಫಿ ನೀಡಿ ಗೌರವಿಸಲಾಯಿತು.