ಹೊಸ ತಾರೆಗೆ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಖಚಿತ; 16ರ ಘಟ್ಟಕ್ಕೇರಿದ ಒಸಾಕಾ, ಸಬಲೆಂಕಾ

ಹೊಸ ತಾರೆಗೆ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಖಚಿತ; 16ರ ಘಟ್ಟಕ್ಕೇರಿದ ಒಸಾಕಾ, ಸಬಲೆಂಕಾ
ಹೊಸ ತಾರೆಗೆ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಖಚಿತ; 16ರ ಘಟ್ಟಕ್ಕೇರಿದ ಒಸಾಕಾ, ಸಬಲೆಂಕಾ
Published on
ಪ್ಯಾರಿಸ್: ಮುಕ್ತ ಟೆನಿಸ್ ಯುಗದಲ್ಲಿ ಮೊದಲ ಬಾರಿಗೆ ಹಾಲಿ-ಮಾಜಿ ಚಾಂಪಿಯನ್‌ಗಳು ಗ್ರಾಂಡ್ ಸ್ಲಾಂ ಟೂರ್ನಿಯ 4ನೇ ಸುತ್ತಿಗೇರಲು ವಿಲವಾಗಿದ್ದು, ಆವೆಮಣ್ಣಿನ ಅಂಕಣದ ಫ್ರೆಂಚ್ ಓಪನ್ ( French Open) ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗ ಈ ಬಾರಿ ಹೊಸ ಚಾಂಪಿಯನ್ ಉದಯಕ್ಕೆ ಸಾಕ್ಷಿಯಾಗಲಿದೆ. ವಿಶ್ವ ನಂ.1 ಜನ್ನಿಕ್ ಸಿನ್ನರ್, ಮಾಜಿ ಚಾಂಪಿಯನ್‌ಗಳಾದ ಸ್ಟಾನ್ ವಾವ್ರಿಂಕಾ, ಮರಿನ್ ಸಿಲಿಕ್ ಹೊರಬಿದ್ದ ಬೆನ್ನಲ್ಲೇ 24 ಗ್ರಾಂಡ್ ಸ್ಲಾಂ ಒಡೆಯ ನೊವಾಕ್ ಜೋಕೊವಿಕ್ ಸಹ ಮೂರನೇ ಸುತ್ತಿನಲ್ಲಿ ಅಚ್ಚರಿಯ ಸೋಲು ಕಂಡರು. ಇದರೊಂದಿಗೆ ಜೂನ್ 7ಕ್ಕೆ ಪ್ಯಾರಿಸ್‌ನಲ್ಲಿ ಗ್ರಾಂಡ್ ಸ್ಲಾಂ ವಿಜೇತರ ಪಟ್ಟಿಗೆ ಹೊಸ ಆಟಗಾರನೊಬ್ಬ ಸೇರ್ಪಡೆಯಾಗುವುದು ಖಚಿತಗೊಂಡಿದೆ.
ಡೆನ್ಮಾರ್ಕ್ ಕ್ಯಾಸ್ಪರ್ ರುಡ್, ರಷ್ಯಾದ ಆಂಡ್ರೆ ರುಬ್ಲೆವ್, ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತಿಗೇರಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಯೂಕ್ರೇನ್‌ನ ಎಲೆನಾ ಸ್ವಿಟೋಲಿನಾ, ಜಪಾನ್‌ನ ನವೊಮಿ ಒಸಾಕಾ ಮತ್ತು ವಿಶ್ವ ನಂ. 1 ಅರಿನಾ ಸಬಲೆಂಕಾ ಮುನ್ನಡೆದರು.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ 16ನೇ ಶ್ರೇಯಾಂಕಿತೆ ನವೊಮಿ ಒಸಾಕಾ 7-6, 6-7, 6-4 ರಿಂದ ಅಮೆರಿಕಾದ ಇವಾ ಜೊವಿಕ್ ವಿರುದ್ಧ ಗೆದ್ದರೆ, ಬೆಲಾರಸ್ ಬೆಡಗಿ ಸಬಲೆಂಕಾ 6-0, 7-5ರಿಂದ ಆಸ್ಟ್ರೇಲಿಯಾದ ಡರಿಯಾ ಕಸಟ್ಕಿನಾರನ್ನು ಮಣಿಸಿದರು. ಯೂಕ್ರೇನ್‌ನ 7ನೇ ಶ್ರೇಯಾಂಕಿತೆ ಸ್ವಿಟೋಲಿನಾ 6-2, 6-3 ರಿಂದ ಜರ್ಮನಿಯ ತಮರಾ ಕೊರ್ಪಾಟ್ಚಾ ಎದುರು ಜಯ ಸಾಧಿಸಿದರು.
ಪುರುಷರ ವಿಭಾಗದಲ್ಲಿ ರುಬ್ಲೆವ್ 7-5, 7-6, 7-6 ಮೂರು ಸೆಟ್‌ಗಳ ಹೋರಾದಲ್ಲಿ ಪೋರ್ಚುಗಲ್‌ನ ನುನೊ ಬೋರ್ಗಸ್‌ರನ್ನು ಮಣಿಸಿದರೆ, 15ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ 4-6, 7-6, 4-4, 7-6, 7-5 ರಿಂದ ಅಮೆರಿಕದ ಟಾಮಿ ಪೌಲ್ ವಿರುದ್ಧ ಗೆಲುವು ಒಲಿಸಿಕೊಂಡರು. 2ನೇ ಶ್ರೇಯಾಂಕಿತ ಜ್ವೆರೇವ್ 6-4, 6-3, 5-7, 6-2 ರಿಂದ ಕ್ವಿಂಟೆನ್ ಹ್ಯಾಲೆಸ್ ಎದುರು ಗೆದ್ದು, ಪ್ಯಾರಿಸ್‌ನಲ್ಲಿ ಎರಡನೇ ವಾರಕ್ಕೆ ಮುನ್ನಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net