ಹೊಸ ಚಿಗುರು ಹಳೆ ಬೇರು

New shoot, old root
New shoot, old root
Published on
ಡಿ.ವಿ.ಜಿ. ತಮ್ಮ ಕಗ್ಗದಲ್ಲಿ ಹೀಗೆಂದಿದ್ದಾರೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು/ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ |/ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ/ ಜಸವು ಜನಜೀವನಕೆ - ಮಂಕುತಿಮ್ಮ || 522 ||- ಋಷಿವಾಕ್ಯ ಅಧ್ಯಾತ್ಮವೂ ಬೇಕು. ವಿಜ್ಞಾನವೂ ಬೇಕು. ಇವೆರಡೂ ಸೇರಿದರೆ ನಮ್ಮ ಜೀವನ ಆನಂದಮಯವಾಗಿರುತ್ತದೆ. ತುಂಬ ಜನ ಒಂದು ತಪ್ಪು ಅಭಿಪ್ರಾಯಕ್ಕೆ ಬಲಿಯಾಗಿದ್ದಾರೆ. ಕೇವಲ ವೇದಾಂತದ ಜ್ಞಾನದಿಂದ ಮನಸ್ಸು ಶುದ್ಧವಾಗುತ್ತದೆಂದು ತಿಳಿದಿದ್ದಾರೆ. ಕೇವಲ ಜ್ಞಾನ, ಮನಸ್ಸನ್ನು ಶುದ್ಧ ಮಾಡದು.
ಶುದ್ಧತೆಯತ್ತ ನಾವು ಗಮನ ಹರಿಸಬೇಕು. ಇಲ್ಲವಾದರೆ ನಮ್ಮ ಜೀವನದಲ್ಲಿ ಅನೇಕ ವಿರೋಧಾಭಾಸಗಳು ಸಂಭವಿಸುತ್ತವೆ.ಒಬ್ಬ ವ್ಯಕ್ತಿ ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳಲಿಲ್ಲವೆಂದ ಮಾತ್ರಕ್ಕೇ ವೇದಾಂತ ಜ್ಞಾನವನ್ನು ದೂಷಿಸುವುದು ಸರಿಯಲ್ಲ. ಹಾಗೆ ಮಾಡಿದರೆ ಅದು -ತನ್ನ ಬಳಿಬಂದ ರೋಗಿಗೆ ವೈದ್ಯರು ಕೆಲವು ಪಥ್ಯವನ್ನು ಹೇಳಿ ಮಾತ್ರೆಗಳನ್ನು ಕೊಟ್ಟರು. ಆದರೆ ಆ ರೋಗಿ ಪಥ್ಯ ಮಾಡದೇ, ಮಾತ್ರೆಗಳನ್ನು ತೆಗೆದುಕೊಳ್ಳದೇ ವೈದ್ಯನನ್ನು ಹಾಗೂ ವೈದ್ಯಶಾಸ್ತ್ರವನ್ನು ಸರಿಯಿಲ್ಲ ಎಂದು ದೂಷಿಸಿದ ಹಾಗೆ. ಇಂತಹ ತರ್ಕ ಅಸಮರ್ಪಕವಾದುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net