ಭಾರತದಲ್ಲಿ ಅತಿ ಕಡಿಮೆ ತೂಕ ಹೊಂದಿರುವ ‘ಯೆಜ್ಡಿ ಸ್ಕ್ರಾಂಬ್ಲರ್ 350 ಸಿಸಿ’, ಹೊಸ ಕಟರ್ ಲಿಕ್ವಿಡ್ ಕೂಲ್ಡ್ ಇಂಜಿನ್ ಹೊಂದಿದೆ. ಇದು 30 ಬಿಎಚ್‌ಪಿ ಶಕ್ತಿ ಮತ್ತು 30 ಎನ್‌ಎಂ ಟಾರ್ಕ್ ನೀಡುವ ಜತೆಗೆ ಅಂದಾಜು 30 ಕಿ.ಮೀ. ಮೈಲೇಜ್ ನೀಡಲಿದೆ. 174 ಕಿಲೋಗ್ರಾಂ ತೂಕದ ಈ ಬೈಕ್, ನಗರ ರಸ್ತೆಗಳಲ್ಲಿ ವೀಕೆಂಡ್ ಟ್ರಿಪ್‌ಗಳಿಗೆ ಅತ್ಯಂತ ಸೂಕ್ತವಾಗಿದೆ. ಈ ಬೈಕ್‌ನ ಬೆಲೆ 1,99,950 ರೂ.ನಿಂದ ಆರಂಭವಾಗಲಿದೆ.