'ಲಿವ್​ಇನ್​ನಲ್ಲಿದ್ದು ಮಗುವಾದರೆ, ಅದು ಅತ್ಯಾಚಾರ ಪ್ರಕರಣ ಎನ್ನಲಾಗುವುದಿಲ್ಲ: ಸುಪ್ರೀಂ ಮಹತ್ವದ ತೀರ್ಪು': ಸುಪ್ರೀಂ ಕೋರ್ಟ್..Live-in relationship

Supreme Court
Supreme Court
Published on

ಪ್ರಮುಖ ಮುಖ್ಯಾಂಶಗಳು

  • ಲಿವ್​ಇನ್​ನಲ್ಲಿದ್ದು ಮಗು ಪಡೆದರೆ ಅತ್ಯಾಚಾರ ಎಂದು ಹೇಗೆ ಕರೆಯಲು ಸಾಧ್ಯ
  • ಸಹಜೀವನದಲ್ಲಿ ಜನಿಸಿದ ಮಗುವಿಗೆ ನಿರ್ವಹಣಾ ವೆಚ್ಚ ಪಡೆಯುವ ಹಕ್ಕಿದೆ ಎಂದ ಸುಪ್ರೀಂ ಕೋರ್ಟ್
  • ಮದುವೆಯಾಗದಿದ್ದರೂ ಮಗು ಅಕ್ರಮವಾಗಿಯೇನು ಹುಟ್ಟಿಲ್ಲವಲ್ಲ ಎಂದು ಕೋರ್ಟ್ ಸ್ಪಷ್ಟನೆ
ಮದುವೆ ಮಾಡಿಕೊಳ್ಳುತ್ತೇನೆ ಎಂದು  ಸುಳ್ಳು ಭರವಸೆ ಕೊಟ್ಟು  ಮಹಿಳೆಯೊಂದಿಗೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ್ದಾನೆ ಎಂದು ಕೋರ್ಟ್​ ಮೆಟ್ಟಿಲೇರಿದ್ದಳು. ಆಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ.

ಅತ್ಯಾಚಾರ ಹೇಗೆ?

 ಸಮ್ಮತಿಯೊಂದಿಗೆ ಇಬ್ಬರು ಲಿವ್​ ಇನ್​ನಲ್ಲಿದ್ದುಕೊಂಡು(Live-in relationship) ಮಗುವನ್ನು ಪಡೆದಿದ್ದಾರೆ. ಆಕೆ ಅದಕ್ಕೆ ತಾಯಿಯಾಗಿದ್ದಾಳೆ. ಇದಕ್ಕೆ ಇಬ್ಬರ  ಸಹಮತವೂ ಇತ್ತು. ಆದರೆ,  ಈಗ ಅತ್ಯಾಚಾರ ಮತ್ತು ಹಲ್ಲೆ ಎಂದು ಆರೋಪ ಮಾಡ್ತಿದ್ದಾರೆ. ಇದೆಲ್ಲಾ ಏನು? ಒಟ್ಟಾಗಿದ್ದು ಒಮ್ಮತದಿಂದಲೇ ಮಗು ಪಡೆದ ಮೇಲೆ ಹೀಗೆ ಹೇಳೋದು ಎಷ್ಟು ಸರಿ  ಎಂದು ನ್ಯಾಯಮೂರ್ತಿ ನಾಗರತ್ನ ಪ್ರಶ್ನಿಸಿದರು.
ಮದುವೆ ಮಾಡಿಕೊಳ್ಳದೆ ಇಂತಹ ಲಿವ್​ಇನ್​ ಸಂಬಂಧಕ್ಕೆ ಒಳಗಾದಾಗ ಕೆಲವು ಅಪಾಯಗಳನ್ನು ಎದುರಿಸು ಕ್ಷಣಗಳು ಬರುತ್ತದೆ. ಒಪ್ಪಂದ ಮತ್ತು ಒಮ್ಮತದ ಜೊತೆಗೆ ಸಂಬಂಧ ಮುಂದುವರೆಸಿದ್ದೀರಿ ಇಲ್ಲಿ ಮೋಸ, ಅಪರಾಧ, ಲೈಂಗಿಕ ದೌರ್ಜನ್ಯದ ಪ್ರಶ್ನೆ ಎಲ್ಲಿಂದ ಬರುತ್ತದೆ. ಇಷ್ಟು ವರ್ಷ ಒಟ್ಟಾಗಿದ್ದು ಈಗ ಬೇರ್ಪಟ್ಟ ನಂತರ ಲೈಂಗಿಕ ದೌರ್ಜನ್ಯ ಎಂದು ದೂರು ಕೊಡೋದು ಸರಿಯಲ್ಲ ಎಂದು ಹೇಳಿದರು. 
ಇತ್ತೀಚೆಗೆ ಮಹಿಳೆಯರು ಲಿವ್​ಇನ್​ನಲ್ಲಿದ್ದು, ಅವರಿಂದ ದೂರವಾದ ನಂತರ ಅದನ್ನೊಂದು ಅಸ್ತ್ರವಾಗಿ ಬಳಸಿಕೊಂಡು ದೂರು ನೀಡುತ್ತಿದ್ದಾರೆ, ಇದು ನಿಜಕ್ಕೂ ವಿಷಾದನೀಯ ಎಂದು ನ್ಯಾಯಮೂರ್ತಿ ಬಿವಿ ನಾಗಲಕ್ಷಿ ಅವರು ಹೇಳಿದರು. 

ಪ್ರಕರಣದ ಹಿನ್ನೆಲೆ ಏನು?

ಅರ್ಜಿದಾರ ಮಹಿಳೆಯ ಪರ ವಕೀಲರು, ಆಕೆ 18 ವರ್ಷದ ವಿಧವೆಯಾಗಿದ್ದಾಗ ಆರೋಪಿ ಪರಿಚಯವಾಗಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಆತನಿಗೆ ಈಗಾಗಲೇ ನಾಲ್ವರು ಪತ್ನಿಯರಿದ್ದರು ಎಂಬ ವಿಷಯ ಆಕೆಗೆ ತಿಳಿದಿರಲಿಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಮದುವೆಯಾಗುವ ಮೊದಲೇ ಆಕೆಯೇಕೆ ಆತನ ಜೊತೆ ವಾಸಿಸಲು ಮತ್ತು ಮಗುವನ್ನು ಪಡೆಯಲು ಯುವತಿ ನಿರ್ಧಾರ ಮಾಡಿದ್ದಾರು ಯಾಕೆ? ಅಕಸ್ಮಾತ್​ ಮದುವೆಯಾಗಿದ್ದರೆ ಆಕೆಗೆ ಹೆಚ್ಚಿನ ಕಾನೂನು ಹಕ್ಕುಗಳು ಸಿಗುತ್ತಿದ್ದವು ಎಂದು ಕೋರ್ಟ್​ ಹೇಳಿತು.
ಸಂಬಂಧವು ಕಾನೂನುಬಾಹಿರವಾಗಿರಬಹುದು, ಆದರೆ ಅಂತಹ ಸಂಬಂಧದಿಂದ ಜನಿಸಿದ ಮಗು ಅಕ್ರಮವಾಗಲು ಸಾಧ್ಯವಿಲ್ಲ. ಮಹಿಳೆಯು ಮಗುವಿನ ನಿರ್ವಹಣಾ ವೆಚ್ಚಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಕೋರ್ಟ್​ ತೀರ್ಪು ನೀಡಿತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net