ಪಾಠಕ್ಕೆ ಹೊಸ ಕೊಠಡಿ ಆಟಕ್ಕೆ ಹಳೇ ಕಟ್ಟಡ

ತಾಂಬಾ ಸಮೀಪದ ಶಿವಪೂರ ಬಿಕೆ ಗ್ರಾಮದ ಸರ್ಕಾರಿ ಕನ್ನಡ ಮಕ್ಕಳ ಪ್ರಾಥಮಿಕ ಶಾಲೆಯ ಸ್ಥಿತಿ.
ತಾಂಬಾ ಸಮೀಪದ ಶಿವಪೂರ ಬಿಕೆ ಗ್ರಾಮದ ಸರ್ಕಾರಿ ಕನ್ನಡ ಮಕ್ಕಳ ಪ್ರಾಥಮಿಕ ಶಾಲೆಯ ಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ಶಿವಪುರ ಬಿಕೆ ಗ್ರಾಮದ ಶಾಲೆಯ ಸ್ಥಿತಿ
  • ಮಕ್ಕಳ ಗೋಳು ಕೇಳೋರ‌್ಯಾರು
  • ಬಲಿಗಾಗಿ ಕಾದು ನಿಂತ ಕಟ್ಟಡಗಳು
ತಾಂಬಾ: ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂದು ಸರ್ಕಾರ ಒಂದೆಡೆ ಮಕ್ಕಳಿಗಾಗಿ ಸುಸಜ್ಜಿತ ವಾತಾವರಣದ ಜತೆಗೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಲು ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದರೆ ಇನ್ನೊಂದೆಡೆ ಮಕ್ಕಳ ಬಲಿಗಾಗಿ ಕಾದು ನಿಂತ ಹಳೆಯ ಶಾಲೆ ಕಟ್ಟಡವನ್ನು ತೆರವುಗೊಳಿಸಲು ಹಣವಿಲ್ಲವೆಂದು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹೌದು. ಸಮೀಪದ ಶಿವಪೂರ ಬಿಕೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಕಲಿಯಲು ಎರಡು ಕೊಠಡಿಗಳು ಮಾತ್ರ ಇದ್ದು, ಇವುಗಳಲ್ಲಿ ಒಂದು ಕೊಠಡಿ ಸಂಪೂರ್ಣ ಹಾಳಾಗಿ ಬೀಳುವ ಹಂತವನ್ನು ತಲುಪಿದೆ. ಇನ್ನೊಂದು ಕೊಠಡಿಯಲ್ಲಿ 1ರಿಂದ 5ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿವೆ. ಸಂಪೂರ್ಣ ಹಾಳಾದ ಕಟ್ಟಡದ ಪಕ್ಕದಲ್ಲಿ ಮಕ್ಕಳು ಆಟವಾಡುವುದುಂಟು, ಆಟವಾಡುವಾಗ ಆಕಸ್ಮಿಕವಾಗಿ ಮಕ್ಕಳ ಮೇಲೆ ಕಟ್ಟಡ ಬಿದ್ದರೆ ಯಾರು ಜವಾಬ್ದಾರರು? ಸಂಪೂರ್ಣ ಶಿಥಿಲಗೊಂಡ ಕಟ್ಟಡವನ್ನು ನೆಲ ಸಮ ಮಾಡುವಂತೆ ಆನೇಕ ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಠಕ್ಕೆ ಹೊಸ ಕಟ್ಟಡ ಆಟಕ್ಕೆ ಹಳೆ ಕಟ್ಟಡ ಎಂಬಂತಾಗಿದೆ. ವಿದ್ಯಾರ್ಥಿಗಳಿಗೆ ಅನಾಹುತವಾಗುವ ಮೊದಲು ಶಿಥಿಲಗೊಂಡ ಕಟ್ಟಡವನ್ನು ನೆಲ ಸಮ ಮಾಡಬೇಕೆಂದು ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
"

ಶಿವಪೂರ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಶಿಥಿಲಗೊಂಡ ಕಟ್ಟಡದ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ ಆಕಸ್ಮಾತ್ ಕಟ್ಟಡ ಬಿದ್ದರೆ ಯಾರು ಹೊಣೆ? ಯಾವುದೇ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಗಮನ ಹರಿಸಿ, ಕಟ್ಟಡ ತೆರವುಗೊಳಿಸಬೇಕು.

ಮಾದೇವಪ್ಪ ಪೂಜಾರಿ ಗ್ರಾಮಸ್ಥ.

ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ಮಾಡಿ ಗಮನಕ್ಕೆ ತರಲಾಗಿದೆ. ಆದೇಶ ಬಂದ ತಕ್ಷಣ ಶಿಥಿಲಗೊಂಡ ಶಾಲೆ ತೆರವುಗೊಳಿಸಲಾಗುವುದು.

ಎಸ್.ಎಸ್. ಮುಜಾವರಕ್ಷೇತ್ರ ಶಿಕ್ಷಣಾಧಿಕಾರಿ ಇಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net