

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಸಾಂಪ್ರದಾಯಿಕೆಉಡುಗೆಗಳಿಗೆ ಪ್ರಸಿದ್ಧವಾಗಿರುವರಾಮ್‌ರಾಜ್ ಕಾಟನ್ ವಸ್ತ್ರ ಭಂಡಾರದನೂತನ 87ನೇಶೋ ರೂಮ್ ಬಸವೇಶ್ವರನಗರದಲ್ಲಿಸೋಮವಾರ ಉದ್ಘಾಟನೆಗೊಂಡಿದೆ.
ಬಸವೇಶ್ವರನಗರದಪವಿತ್ರ ಪ್ಯಾರಾಡೈಸ್ ಮುಂಭಾಗದಲ್ಲಿಆರಂಭಗೊಂಡ ನೂತನ ಮಳಿಗೆಗೆ ವಿಜಯನಗರದಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥಸ್ವಾಮೀಜಿ ಚಾಲನೆ ನೀಡಿದರು.
ಮಳಿಗೆಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ,ದಕ್ಷಿಣ ಭಾರತದಲ್ಲಿರಾಮ್‌ರಾಜ್ ಉಡುಪುಗಳ ಜನಮನಗೆದ್ದಿದೆ.ಶುಭ್ರವಾದ,ಎಲ್ಲ ವಯೋಮಾನದವರಿಗೂಆಕರ್ಷಕವಾದ ಬಟ್ಟೆಗಳನ್ನುವಿನ್ಯಾಸಗೊಳಿಸಿಕೊಡುವ ರಾಮರಾಜ್ಬಟ್ಟೆಗಳು ಆರೋಗ್ಯಕ್ಕೂ ಉತ್ತಮವಾಗಿವೆ.ಕಾಟನ್ ಬಟ್ಟೆಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು,ಇದನ್ನು ಧರಿಸುವವರುಲಕ್ಷಣವಾಗಿ ಕಾಣುತ್ತಾರೆ ಎಂದುವಿವರಿಸಿದರು.
ಸ್ಥಳೀಯಮುಖಂಡ ರಘುವೀರ ಗೌಡ ಮಾತನಾಡಿ,ರಾಮ್‌ರಾಜ್ಎಂದರೆ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು,ಭಾರತೀಯಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿಪ್ರಮುಖ ಪಾತ್ರ ವಹಿಸುತ್ತಿದೆ.ಬೆಂಗಳೂರಿನಎಲ್ಲ ಭಾಗಗಳಲ್ಲೂ ರಾಮ್‌ರಾಜ್ಶೋರೂಮ್‌ಗಳಿವೆ.ಇದೀಗ ಬಸವೇಶ್ವರನಗರದಲ್ಲಿರಾಮ್‌ರಾಜ್ ಮಳಿಗೆ ತೆರೆದಿರುವುದುಈ ಭಾಗದ ಜನರಿಗೆ ಅನುಕೂಲವಾಗಿದೆಎಂದರು. ಹಿರಿಯರಾದಪುಷ್ಪ ನಂದೀಶ್ ಮತ್ತಿತರರುಉಪಸ್ಥಿತರಿದ್ದರು.