ಸೌಜನ್ಯ ಕೊಲೆ, ಅತ್ಯಾ*ಚಾರ ಪ್ರಕರಣಕ್ಕೆ ಮರುಜೀವ: ಎನ್. ಶಶಿಕುಮಾರ್​ ನೇತೃತ್ವದಲ್ಲಿ ನೂತನ SIT ರಚಿಸಿ ಸರ್ಕಾರ ಆದೇಶ! Soujanya Case

ಬಹುಚರ್ಚಿತ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಮರುಜೀವ! ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ನೂತನ ಎಸ್‌ಐಟಿ (SIT) ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಂಪೂರ್ಣ ವಿವರ ಇಲ್ಲಿದೆ.
ಸಂತ್ರಸ್ತೆ ಸೌಜನ್ಯ, ಎನ್​.ಶಶಿಕುಮಾರ್​ ಐಪಿಎಸ್​
ಸಂತ್ರಸ್ತೆ ಸೌಜನ್ಯ, ಎನ್​.ಶಶಿಕುಮಾರ್​ ಐಪಿಎಸ್​
Published on: 

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಮರು ತನಿಖೆಗೆ ಆದೇಶಿಸಿ, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೇಳಿದ ಬಳಿಕ, ಇಂದು (ಗರುವಾರ, ಸೆ.24) ಕರ್ನಾಟಕ ಸರ್ಕಾರ ನೂತನ ಎಸ್​ಐಟಿ ತಂಡವನ್ನು ರಚಿಸಿ ತನಿಖೆಗೆ ಅನುಮತಿ ನೀಡಿದೆ.

ಸುಪ್ರೀಂ ಕೋರ್ಟ್​ನಿಂದ ನಿರ್ದೇಶನ ದೊರೆತ ನಂತರ ಈ ಬೆಳವಣಿಗೆ ಕಂಡುಬಂದಿದ್ದು, ರಾಜ್ಯ ಸರ್ಕಾರ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈ ಎಸ್​ಐಟಿ ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್, ವೆಂಕಟೇಶ್ ಪ್ರಸನ್ನ ಅವರನ್ನು ಒಳಗೊಂಡಿದೆ.

ಕುಸುಮಾವತಿ ಅರ್ಜಿ ಅಂಗೀಕರಿಸಿದ ಸುಪ್ರೀಂ!

ತನ್ನ ಮಗಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆದಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಈ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶಿಸಿದೆ.

ಈ ಪ್ರಕರಣವನ್ನು ಕರ್ನಾಟಕದ ಸಿಐಡಿ ಹಾಗೂ ಕೇಂದ್ರದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರೂ ಸಹ ಅಪರಾಧಿಗಳನ್ನು ಕಂಡು ಹಿಡಿಯುವುದರಲ್ಲಿ ಸಫಲರಾಗಿರಲಿಲ್ಲ. ಆದ್ದರಿಂದ ಕುಸುಮಾವತಿ ತನ್ನ ಮಗಳ ಸಾವಿಗೆ ನ್ಯಾಯ ದೊರೆತಿಲ್ಲವೆಂದು ಮರು ತನಿಖೆಗೆ ಮನವಿ ಸಲ್ಲಿಸಿದ್ದರು. ಈಗ ಈ ಮನವಿಯನ್ನು ಸಮ್ಮತಿಸಿರುವ ಸುಪ್ರೀಂ ಕೋರ್ಟ್​ ಮೂರು ತಿಂಗಳಲ್ಲಿ ತನಿಖೆ ಪೂರೈಸಿ, ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

Also Read
ಧರ್ಮಸ್ಥಳ ಸೌಜನ್ಯಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್​: ಕುಸುಮಾವತಿ ಅರ್ಜಿಗೆ ಸುಪ್ರೀಂ ಅಸ್ತು; ಪ್ರಕರಣದ ಮರು ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಆದೇಶ! Supreme Court on Sowjanya Case
ಸಂತ್ರಸ್ತೆ ಸೌಜನ್ಯ, ಎನ್​.ಶಶಿಕುಮಾರ್​ ಐಪಿಎಸ್​

ಸಿಬಿಐ ಮೇಲೆ ಸುಪ್ರೀಂ ಅಸಮಾಧಾನ!

ಈ ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದ ಸಂತೋಷ್​ ರಾವ್​ನನ್ನು ಸಿಬಿಐ ನ್ಯಾಯಾಲಯ ಅಪರಾಧಿಯಲ್ಲ ಎಂದು ಬಿಡುಗಡೆ ಮಾಡಿದ ನಂತರ ಕುಸುಮಾವತಿ, ತನ್ನ ಮಗಳ ಪ್ರಕರಣವನ್ನು ಪೊಲೀಸರು ಸರಿಯಾಗಿ ನಡೆಸಿಲ್ಲ, ಇಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು. ಸಂತೋಷ್​ ರಾವ್​ನ ಬಿಡುಗಡೆ ನಂತರ, ಕುಸುಮಾವತಿ ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಪೀಠ ಈ ಅರ್ಜಿಯನ್ನು ವಜಾಮಾಡಿತ್ತು. ನಂತರ ಸೌಜನ್ಯ ತಾಯಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಸಿಬಿಐ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ, ನ್ಯಾಯಪೀಠ, ಸಿಬಿಐ ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ನಡೆಸಿಲ್ಲ, ಬದಲಾಯಿ ಈ ಹಿಂದೆ ಸಂಗ್ರಹವಾಗಿದ್ದ ಸಾಕ್ಷಿಗಳ ಆಧಾರದಲ್ಲಿ ವರದಿ ಸಲ್ಲಿಸಿದೆ ಎಂದು ಹೇಳಿದೆ. ಈ ರೀತಿಯ ತನಿಖೆ ಸಿಬಿಐ ನ ಕೆಟ್ಟ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಪೀಠ ಕಿಡಿಕಾರಿತ್ತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net