ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ವೈದ್ಯರುಗಳ ಜತೆಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಅತ್ಯುತ್ತಮ ಆರೈಕೆಗೆ ಹೆಸರು ವಾಸಿಯಾದ ಆಸ್ಪತ್ರೆಯಲ್ಲಿ ಸುರಕ್ಷತೆ ಹೆರಿಗೆ ನಮ್ಮ ಬದ್ಧತೆ ಎಂಬ ಸಾಮಾಜಿಕ ಕಾಳಜಿ ಜತೆಗೆ ಸದ್ಯ ಜಾರಿಗೆ ತಂದಿರುವ ಜೆಎಸ್‌ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಗೆ ಉಚಿತ ಆರೈಕೆ ಮಾಡಲು ಮುಂದಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಇಂತಹ ಯೋಜನೆಗಳು ಸಹಕಾರಿ ಆಗಲಿವೆ ಎಂದು ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ತಿಳಿಸಿದರು.