ವೈಯಕ್ತಿಕ ಉದ್ದಿಮೆದಾರರು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದಾರೆ. ಪಿಎಂಎಫ್ಎಂಇ ಯೋಜನೆಯಡಿ ಆಹಾರ ಸಂಸ್ಕರಣಾ, ಮೌಲ್ಯವರ್ಧನಾ ಘಟಕಗಳು, ಪಶು ಮತ್ತು ಕುಕ್ಕುಟ ಆಹಾರ ಘಟಕಗಳನ್ನು ಸ್ಥಾಪಿಸಬಹುದು. ಉದಾಹರಣೆಗೆ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ ಉತ್ಪಾದನೆ, ಎಣ್ಣೆ ಗಾಣಗಳು, ಬೇಕರಿ ಉತ್ಪನ್ನಗಳು, ಮಸಾಲ ಪುಡಿ ಘಟಕಗಳು, ಶುಂಠಿ ಸಂಸ್ಕರಣೆ, ತೆಂಗಿನ ಉತ್ಪನ್ನ, ವಿವಿಧ ಹಣ್ಣು- ತರಕಾರಿ ಉತ್ಪನ್ನ, ಸಾಗರೋತ್ಪನ್ನಗಳ ಇತ್ಯಾದಿ ಪದಾರ್ಥಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.