2027 ಮಾರ್ಚ್​ದೊಳಗೆ ನೂತನ ಅನುಭವ ಮಂಟಪ ಲೋಕಾರ್ಪಣೆ

ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಸೋಮವಾರ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಇಷ್ಟಲಿಂಗ (55 ಮೀ.) ನಿರ್ಮಾಣಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.
ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಸೋಮವಾರ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಇಷ್ಟಲಿಂಗ (55 ಮೀ.) ನಿರ್ಮಾಣಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಈಶ್ವರ ಖಂಡ್ರೆ ವಿಶ್ವಾಸ
  • ಕಲ್ಯಾಣದಲ್ಲಿ ಇಷ್ಟಲಿಂಗ ನಿರ್ಮಾನಕ್ಕೆ ಪೂಜೆ
ಬಸವಕಲ್ಯಾಣ: ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಬಸವಣ್ಣನವರ ಕರ್ಮಭೂಮಿ ಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ನೂತನ ಅನುಭವ ಮಂಟಪ ಮುಂಬರುವ 2027ರ ಮಾರ್ಚ್​ ಅಂತ್ಯದೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಅನುಭವ ಮಂಟಪದಲ್ಲಿ ಸೋಮವಾರ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಇಷ್ಟಲಿಂಗ (55 ಮೀ.) ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ನೂತನ ಅನುಭವ ಮಂಟಪ ಕಟ್ಟಡದ 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಕೆತ್ತಲಾಗುತ್ತಿದೆ. ವೈಾನಿಕವಾಗಿ ನೆಮ್ಮದಿ ನೀಡುವಂತಹ ಇಷ್ಟಲಿಂಗ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಬದುಕನ್ನು ಹಸನಗೊಳಿಸಿಕೊಳ್ಳಲು ವೈಚಾರಿಕ ವಚನಗಳು ಸಹ ಆಧುನಿಕ ವಿಾನ ತಂತ್ರಾನ ಮೂಲಕ ಐಐಟಿ ವಿಾನಿಗಳ ಮೂಲಕವಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅನುಭವ ಮಂಟಪಕ್ಕೆ ಹಣದ ಕೊರತೆ ಇಲ್ಲ. ಇದುವರೆಗೆ 480 ಕೋಟಿ ರೂ. ರ್ಖಚಾಗಿದೆ. ಮುಖ್ಯಮಂತ್ರಿ ಈ ಪೈಕಿ 280 ಕೋಟಿ ರೂ. ಅನುದಾನ ನೀಡಿದ್ದಾರೆ. ಉಳಿದ ಹಣವನ್ನು ಸಹ ಶ್ರೀವೇ ಬಿಡುಗಡೆ ಮಾಡಲಿದ್ದಾರೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ, ತಹಸೀಲ್ದಾರ್​ ಡಾ.ದತ್ತಾತ್ರಿ ಗಾದಾ, ನಗರಸಭೆ ಆಯುಕ್ತ ರಾಜು ಡಿ.ಬಣಕಾರ, ಅನುಭವ ಮಂಟಪದ ಸಂಯೋಜಕ ಡಾ.ಬಾಬಾಸಾಹೇಬ್​ ಗಡ್ಡೆ, ಬ್ಲಾಕ್​ ಕಾಂಗ್ರೆಸ್​ ಅಧ್ಯ ನೀಲಕಂಠ ರಾಠೋಡ್​, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯ ಶಶಿಕಾಂತ ದುರ್ಗೆ, ಯುವರಾಜ ಭೇಂಡೆ, ಮನೋಹರ ಮೈಸೆ, ಮನೋಜ ಮಾಶೆಟ್ಟಿ, ಸಂದೀಪ ಗುಹೆ, ನಿತ್ಯಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net