ನೇತಾಜಿ ಸಂಘದಿಂದ ನೇತಾಜಿ ಶಿಕ್ಷಕ ಪ್ರಶಸ್ತಿ ಪ್ರದಾನ

ಗೌರಿಬಿದನೂರು ತಾಲೂಕಿನ ನೇತಾಜಿ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನೇತಾಜಿ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ವಕೀಲ ಅಶೋಕ್​, ಸಂಘದ ಕಾರ್ಯದರ್ಶಿ ಚಿಕ್ಕಣ್ಣ ಹಾಗೂ ಸದಸ್ಯ ಗೌರೀಶ್​, ನಂಜುಂಡಪ್ಪ, ಕೆ.ವಿ. ಪ್ರಕಾಶ್​, ಜಯಕುಮಾರ್​, ಮಲ್ಲಿಕಾರ್ಜುನ್​, ಗುರುರಾಜ್​, ಪ್ರವಿಣ್​, ಜಾಲಿ ರಾಮಕೃಷ್ಣ ಇದ್ದರು.

Published on
ಗೌರಿಬಿದನೂರು :ನೇತಾಜಿ ಯುವಕ ಸಂಘದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೇತಾಜಿ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ತಾಲೂಕಿನ ಅಲಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್​ಬಿ ಗೋಪಾಲ, ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಶಬ್ರೀನ್​ ತಾಜ್​ ಅವರನ್ನು ಸಂಘದಿಂದ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಕ ಆರ್​.ಬಿ.ಗೋಪಾಲ ಮಾತನಾಡಿ, ಸಮಾಜದ ಸಕ್ರಿಯ ಯುವ ಸಂಘಟನೆಗಳು ಶಿಕ್ಷಕರ ಸೇವೆ ಗುರುತಿಸಿ ಗೌರವಿಸಿದಾಗ, ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಯಿಂದ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ಯುವಜನತೆಯನ್ನು ಉತ್ತಮ ದಾರಿಯೆಡೆ ಮುನ್ನಡೆಸಲು ನೇತಾಜಿ ಯುವಕ ಸಂಘ ಮಾಡುತ್ತಿರುವ ಸಾಮಾಜಿಕ ಕೆಲಸ ಶ್ಲಾಘನೀಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net