Net profit of ₹15.84 lakh for K. Kadarenahalli Dairy
Published on:
Copied
Follow Us
ಬೂದಿಕೋಟೆ: ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಡೇರಿಗೆ ಹಾಕಿದ ಪರಿಣಾಮ ಸಂಘಕ್ಕೆ 15.84ಲಕ್ಷ ಆದಾಯ ಬಂದಿದ್ದು, ಆದಾಯದಲ್ಲಿ 6.78 ಲಕ್ಷ ರೂ.ಅನ್ನು ಹಾಲು ಉತ್ಪಾದಕರಿಗೆ ಬೋನಸ್ ನೀಡಲಾಗುತ್ತದೆ ಎಂದು ಕದಿರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಮುನಿರಾಜು ತಿಳಿಸಿದರು.
ಕದಿರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರ ದೂರದೃಷ್ಟಿಯಿಂದ ಗ್ರಾಮೀಣ ಭಾಗದ ಜನರು ಹೈನುಗಾರಿಕೆಯಲ್ಲಿ ತೊಡಗಿ ಯಾರ ಮುಂದೆಯೂ ಕೈ ಕಟ್ಟಿ ನಿಲ್ಲದೆ ಸ್ವಂತ ಸಂಪಾದನೆಯಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹೈನುಗಾರಿಕೆ ಇಲ್ಲದಿದ್ದರೆ ಬರಗಾಲದಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತಿತ್ತು ಎಂದರು.
ಸಂಘದಲ್ಲಿ ಅಕ್ರಮಕ್ಕೆ ಆಸ್ಪದ ಕೊಡಬಾರದು. ಜತೆಗೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಡೇರಿ ಹಾಗೂ ಉತ್ಪಾದಕರು ಪೂರೈಸಿದ ಹಾಲಿನ ಮಾಹಿತಿ ಸೇರಿ ಎಲ್ಲ ಮಾಹಿತಿಯನ್ನು ನಾಮಫಲಕದಲ್ಲಿ ಹಾಕಲಾಗುತ್ತಿದೆ. ಹಾಲು ಉತ್ಪಾದಕರು ಕೇವಲ ಡೇರಿಗೆ ಹಾಲು ಹಾಕಿದರೆ ಸಾಲದು ಒಕ್ಕೂಟದಿಂದ ಉತ್ಪಾದಿಸುವ ಎಲ್ಲ ಬಗೆಯ ಹಾಲಿನ ಉತ್ಪನ್ನಗಳನ್ನು ಖರೀದಿಸಿ ಬೆಂಬಲ ನೀಡಬೇಕು ಎಂದರು.
ಉಪವ್ಯವಸ್ಥಾಪಕ ಗಿರೀಶ್ಗೌಡ ಮಾತನಾಡಿ, ಆಡಳಿತ ಮಂಡಳಿ ಡೇರಿಯನ್ನು ಉತ್ತಮವಾಗಿ ನಿರ್ವಹಿಸುತ್ತಾ ಬರುತ್ತಿದ್ದು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಹಾಕುತ್ತಿರುವ ಕಾರಣ ಸಂಘಕ್ಕೆ ಉತ್ತಮ ಆದಾಯ ಬಂದಿದೆ. ಆದಾಯದಲ್ಲಿ 100 ರೂ. ಗಳಿಗೆ 2.32 ರೂಪಾಯಿಯಂತೆ ಉತ್ಪಾದಕರಿಗೆ ಬೋನಸ್ ನೀಡಲಾಗುತ್ತದೆ ಎಂದರು.
ಡಿಸೆಂಬರ್ನಿಂದ ರೈತರ ಹಾಲಿನ ಬೆಲೆ ಹೆಚ್ಚಿಸುವ ಸಾಧ್ಯತೆಯಿದ್ದು, ಫಲಾನುಭವಿಗಳಿಗೆ ಮುಂದಿನ ವಾರದಿಂದ ಮಿಲ್ಕಿಂಗ್ ಮಿಷನ್ ವಿತರಣೆ ಮಾಡಲಾಗುತ್ತದೆ. ಚಾಪ್ ಕಟರ್ಗೆ ಟೆಂಡರ್ ಕರೆಯಲಾಗಿದ್ದು, ಮ್ಯಾಟ್ಗಳನ್ನು ಅಗತ್ಯಕ್ಕೆ ಹಾಗೂ ಬೇಡಿಕೆಗೆ ತಕ್ಕಂತೆ ವಿತರಿಸಲಾಗುತ್ತದೆ ಎಂದರು.
ಸಿಂಗಾಪುರ ಸೇರಿ ಇತರೆ ದೇಶಗಳಿಗೆ ಹಾಲು ರ್ತು ಮಾಡಬೇಕಾದರೆ ಜಿಡ್ಡಿನಾಂಶ ಹೆಚ್ಚಾಗಿರಬೇಕು. ಅದಕ್ಕಾಗಿ ಹಾಲಿನಲ್ಲಿ ಹೆಚ್ಚು ಜಿಡ್ಡು ಬರುವಂತೆ ರಾಸುಗಳಿಗೆ ಪೋಷಕಾಂಶವುಳ್ಳ ಮೇವು ಒದಗಿಸಬೇಕು. ಎಮ್ಮೆ ಹಾಲಿನಲ್ಲಿ ಹೆಚ್ಚು ಜಿಡ್ಡಿನಾಂಶ ಇರುವ ಕಾರಣ ಜಿಲ್ಲೆಯ 1000 ರೈತರಿಗೆ ಮುರ್ರಾ ತಳಿಯ ಎಮ್ಮೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಕ್ಕೂಟದಿಂದ 30 ಸಾವಿರ ರಿಯಾಯಿತಿ ನೀಡಲಾಗುತ್ತದೆ ಎಂದರು.
ಉಪಾಧ್ಯಕ್ಷ ಎಂ.ರಾಜೇಂದ್ರ, ನಿರ್ದೇಶಕರಾದ ಕೆ.ವಿ.ಸತೀಶ್, ವಿ.ದೇವರಾಜ್, ನಾರಾಯಣಸ್ವಾಮಿ, ವೆಂಕಟೇಶಪ್ಪ, ಕೆ.ಟಿ.ಚೌಡಪ್ಪ, ವಿ.ನಾಗರಾಜ್, ಮುನಿಯಪ್ಪ, ಸರೋಜಮ್ಮ, ನೀಲಮ್ಮ, ಮಾಜಿ ಅಧ್ಯಕ್ಷ ನಾಗರಾಜ್, ಕೆ.ಸಿ.ಮೂರ್ತಿ, ಕಾರ್ಯದರ್ಶಿ ವೆಂಕಟರಾಮಪ್ಪ, ವಿಸ್ತರಣಾಧಿಕಾರಿ ಭಾನುಪ್ರಕಾಶ್ ಇದ್ದರು.