ಚರಕ ಆಸ್ಪತ್ರೆಯಲ್ಲಿ ನೆಫ್ರೋ ಯುರಾಲಜಿ, ಡಯಾಲಿಸಿಸ್, ಹೃದಯ ಚಿಕಿತ್ಸಾ ಸೇವೆ
A memorandum of understanding was signed on Monday with the Nephro-urology Institute, Sri Jayadeva Cardiovascular Science and Research Institute, Charaka Hospital to expand nephro-urology treatment, dialysis services and heart disease treatment at Charaka Hospital in Shivajinagar. Minister Rizwan Harshad, Dr. M. Shivalingaiah, Dr. Dinesh, Dr. Srikanth and others were present.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
* ನೆಫ್ರೋ ಯುರಾಲಜಿಯ 40 ಹಾಸಿಗೆಗಳ ಮೂತ್ರಪಿಂಡ ಘಟಕ
* ಹೃದ್ರೋಗಿಗಳ ಆರೈಕೆಗಾಗಿ 100 ಹಾಸಿಗೆಗಳ ಹೃದಯ ಚಿಕಿತ್ಸಾ ಘಟಕ
ಬೆಂಗಳೂರು:ಶಿವಾಜಿನಗರ ಚರಕ ಆಸ್ಪತ್ರೆಯಲ್ಲಿ ನೆಫೋಯುರಾಲಜಿ ಚಿಕಿತ್ಸೆ, ಡಯಾಲಿಸಿಸ್ ಸೇವೆ ಹಾಗೂ ಹೃದ್ರೋಗ ಚಿಕಿತ್ಸೆ ಸೇರಿ ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ನೆಫ್ರೋ ಯುರಾಲಜಿ ಸಂಸ್ಥೆ, ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಚರಕ ಆಸ್ಪತ್ರೆಯೊಂದಿಗೆ ಸೋಮವಾರ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಂಸ್ಥೆಗಳ ಸಹಯೋಗದಲ್ಲಿ ಆಸ್ಪತ್ರೆಯ ಸೌಲಭ್ಯಗಳ ನಿರ್ವಹಣೆ ಮತ್ತು ಕಾರ್ಯಚರಣೆಗಾಗಿ 29 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಉದ್ದೇಶಿಸಲಾಗಿದೆ.
ಆಸ್ಪತ್ರೆಯಲ್ಲಿರುವ 40 ಹಾಸಿಗೆಗಳ ಮೂತ್ರಪಿಂಡ ಆರೈಕೆ ಘಟಕವನ್ನು ನೆಫ್ರೋ-ಮೂತ್ರಶಾಸ್ತ್ರ ಸಂಸ್ಥೆ (ಐಎನ್‌ಯು) ವಹಿಸಿಕೊಳ್ಳಲಿದೆ, ಅದರ 23 ಡಯಾಲಿಸಿಸ್ ಯಂತ್ರಗಳು ಈಗ ಭಾನುವಾರ ಸೇರಿ ಮೂರು ಪಾಳಿಗಳಲ್ಲಿ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿವೆ. ಜತೆಗೆ ಜಯದೇವ ಆಸ್ಪತ್ರೆ 100 ಹಾಸಿಗೆಗಳ ಹೃದಯ ಘಟಕವೂ ಸೇವೆ ಒದಗಿಸಲಿದೆ.
ಚರಕ ಡಯಾಲಿಸಿಸ್ ಕೇಂದ್ರವು ಕಳೆದ ಏಪ್ರಿಲ್‌ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿದೆ. ಆರಂಭದಲ್ಲಿ ಒಂದೇ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಆಗಸ್ಟ್ 28ರವರೆಗೆ 2,210 ಡಯಾಲಿಸಿಸ್ ನಡೆಸಲಾಗಿದೆ. ಏಪ್ರಿಲ್‌ನಲ್ಲಿ 239, ಮೇನಲ್ಲಿ 460, ಜೂನ್‌ನಲ್ಲಿ 483, ಜುಲೈನಲ್ಲಿ 570, ಆಗಸ್ಟ್‌ನಲ್ಲಿ 458 ಸೇವೆಗಳನ್ನು ಒದಗಿಸಲಾಗಿದೆ ಎಂದು ನೆಫ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಶಿವಲಿಂಗಯ್ಯ ತಿಳಿಸಿದ್ದಾರೆ.
ಶಿವಾಜಿನಗರ, ಉತ್ತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ದೀರ್ಘಕಾಲೀನ ಮೂತ್ರಪಿಂಡ ಬದಲಿ ಚಿಕಿತ್ಸೆ ಮತ್ತು ತಜ್ಞ ಸೇವೆಗಳ ಅಗತ್ಯವಿರುವ ರೋಗಿಗಳಿಗೆ ಈ ವಿಸ್ತರಣೆಯು ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಎನ್‌ಯು ಪ್ರಸ್ತುತ 10 ಹೆಚ್ಚುವರಿ ಸೇರಿ 156 ಸಕ್ರಿಯ ಹಾಸಿಗೆಗಳನ್ನು ಹೊಂದಿದೆ, ಆದರೆ 80 ಹಾಸಿಗೆಗಳ ಅನೆಕ್ಸ್ ಕಟ್ಟಡವು ಶೀಘ್ರದಲ್ಲೇ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
100 ಹಾಸಿಗೆಗಳ ಹೃದಯ ಘಟಕ:
ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯು ಹೊಸ ವ್ಯವಸ್ಥೆಯಡಿ 100 ಹಾಸಿಗೆಗಳ ಜಯದೇವ ಘಟಕವನ್ನು ಸಹ ಹೊಂದಲಿದೆ. ಆಸ್ಪತ್ರೆಯು 140 ಹಾಸಿಗೆಗಳು ಮತ್ತು ಸುಮಾರು 70,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 100 ಹಾಸಿಗೆಗಳ ಜಯದೇವ ಘಟಕವು ನೆಲ, ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಸ್ಥಳಾವಕಾಶ ಕಲ್ಪಿಸಲಿದ್ದು, ಮೊದಲ ಮಹಡಿಯಲ್ಲಿ ನೆಪ್ರೋ ಯುರಾಲಜಿ, ಡಯಾಲಿಸಿಸ್ ಮತ್ತು ಸಂಬಂಧಿತ ಸೇವೆಗಳು ಇರುತ್ತವೆ.