ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು

ದೋರನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಉಚಿತ ಸಮುದಾಯ ಆರೋಗ್ಯ ಶಿಬಿರವನ್ನು ಸ್ಮೆÊಲ್ ಪೌಂಡೇಷನ್ ಯೋಜನಾ ಸಂಯೋಜಕ ಅಬ್ದುಲ್ ಶಫಿ ಅಹ್ಮದ್ ಉದ್ಘಾಟಿಸಿದರು. ಡಾ.ಶರಣಬಸಪ್ಪ ಬ್ಯಾಕೋಡ್, ಡಾ.ಮಹಮ್ಮದ್ ಮೋಬಿನ್ ಅಶರ್, ಡಾ.ವಿದ್ಯಾ ಪಾಟೀಲ್ ಇತರರಿದ್ದರು.
ದೋರನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಉಚಿತ ಸಮುದಾಯ ಆರೋಗ್ಯ ಶಿಬಿರವನ್ನು ಸ್ಮೆÊಲ್ ಪೌಂಡೇಷನ್ ಯೋಜನಾ ಸಂಯೋಜಕ ಅಬ್ದುಲ್ ಶಫಿ ಅಹ್ಮದ್ ಉದ್ಘಾಟಿಸಿದರು. ಡಾ.ಶರಣಬಸಪ್ಪ ಬ್ಯಾಕೋಡ್, ಡಾ.ಮಹಮ್ಮದ್ ಮೋಬಿನ್ ಅಶರ್, ಡಾ.ವಿದ್ಯಾ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶರಣಬಸಪ್ಪ ಬ್ಯಾಕೋಡ್ ಎಚ್ಚರಿಕೆ
  • ದೋರನಹಳ್ಳಿಯಲ್ಲಿ ಉಚಿತ ಸಮುದಾಯ ಆರೋಗ್ಯ ಶಿಬಿರ
ದೋರನಹಳ್ಳಿ:

ಆರೋಗ್ಯದ ವಿಷಯದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಕೂಡ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಡಾ.ಶರಣಬಸಪ್ಪ ಬ್ಯಾಕೋಡ್ ಎಚ್ಚರಿಕೆ ನೀಡಿದರು.

ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸ್ಮೆÊಲ್ ಪೌಂಡೇಷನ್‌ನಿAದ ಹಮ್ಮಿಕೊಂಡ ಉಚಿತ ಸಮುದಾಯ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ನಾವು ಎಲ್ಲ ಚನ್ನಾಗಿದ್ದೇವೆ ಎಂದುಕೊಳ್ಳುತ್ತಲೇ ಆರೋಗ್ಯದ ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೇವೆ. ಇವುಗಳೆ ನಮಗೆ ಮುಂದೆ ದೊಡ್ಡ ಪರಿಣಾಮ ಬೀರುತ್ತವೆ. ಬಿಪಿ, ಶುಗರ್, ರಕ್ತ ಹೀನತೆ, ತಲೆನೋವು, ಕೈ ಕಾಲು ಜೋಮು ತುಂಬುವುದು ಸಾಮಾನ್ಯ ಅನಿಸಿದರು ಅವು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತವೆ. ಹೀಗಾಗಿ ಯಾರೂ ಕೂಡ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.
ಇAದು ಕಲುಷಿತ ಆಹಾರದಿಂದಾಗಿ ಮತ್ತು ಜಂಕ್ ಪುಡ್‌ನಿಂದ ಸರಿಯಾದ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ನಾವು ಮೇಲ್ನೋಟಕ್ಕೆ ಆರೋಗ್ಯವಂತರು, ಸದೃಢವಾಗಿ ಕಂಡರು ಬಿಪಿ, ಶುಗರ್, ರಕ್ತಹೀನತೆ ಅಂತ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಅವು ಮುಂದೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೇ ಆದ್ದರಿಂದ ಆರಂಭದಲ್ಲೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ನೇತ್ರ ತe್ಞೆ ಡಾ.ವಿದ್ಯಾ ಪಾಟೀಲ್ ಮಾತನಾಡಿ ಕಣ್ಣುಗಳು ನಮ್ಮ ದೇಹದಲ್ಲಿ ಬಹು ಮುಖ್ಯವಾದ ಅಂಗ. ಅವುಗಳು ಚನ್ನಾಗಿದ್ದರೆ ಎಲ್ಲ ಕೆಲಸ ಚನ್ನಾಗಿ ಮಾಡಿಕೊಳ್ಳಬಹುದು. ಕಣ್ಣುಗಳಿಗೆ ಪರಿ ಬಂದಾಗ ಬೇಗ ತೆಗೆಸಿಕೊಳ್ಳಬೇಕು ಅದನ್ನು ನಿರ್ಲಕ್ಷ÷್ಯ ವಹಿಸಿದರೆ ಮುಂದೆ ಕಣ್ಣಿನ ದೋಷದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ ಅಲ್ಲದೆ ಕಣ್ಣಿನ ಆರೋಗ್ಯಕ್ಕಾಗಿ ತರಕಾರಿ ಸೇವಿಸುವುದು ಬಹಳ ಅಗತ್ಯ ಎಂದರು.
ಡಾ.ಮಹಮ್ಮದ ಮೋಬಿನ್ ಅಶರ್ ಮಾತನಾಡಿದರು. ನಂತರ ೧೫೦ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ಈ ವೇಳೆ ಸ್ಮೆÊಲ್ ಪೌಂಡೇಷನ್ ಯೋಜನಾ ಸಂಯೋಜಕ ಅಬ್ದುಲ್ ಶಫಿ ಅಹ್ಮದ್, ಹುಣಚಪ್ಪ ಖಣದಾಳ, ಸಿದ್ದು ಹೂಗಾರ, ಅಂಬರೀಶ ತೆಲಗರ್, ಸೈ-Àನ್ ಕೆಂಭಾವಿ, ನಿಜಲಿಂಗ ಜಂಗಳಿ, ಸಣ್ಣ ಹಯ್ಯಾಳಪ್ಪ ಗುಂಟನೂರ, ಜಿಲಾನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net