ಪಶುಗಳ ಆರೋಗ್ಯ ಕಡೆಗಣಿಸಿದರೆ ಆರ್ಥಿಕ ನಷ್ಟ

Neglecting animal health can lead to financial losses.
Neglecting animal health can lead to financial losses.
Published on
ಗೌರಿಬಿದನೂರು: ರೈತರ ಒಡನಾಡಿಗಳಾದ ಪಶುಗಳ ಆರೋಗ್ಯ ಕಡೆಗಣಿಸಿದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ ವತಿಯಿಂದ ನಗರದಲ್ಲಿ ನಿರ್ಮಿಸಿರುವ ಪಶು ವೈದ್ಯಕಿಯ ಪಾಲಿ ಕ್ಲಿನಿಕ್​ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎರಡನೇ ದೊಡ್ಡ ಪಾಲಿ ಕ್ಲಿನಿಕ್​ ಇದಾಗಿದ್ದು, ಸುಮಾರು 40 ಲ ರೂ.ವೆಚ್ಚದಲ್ಲಿ ಕಟ್ಟಡದ ಜತೆಗೆ ಮೂಲಸೌಲಭ್ಯಗಳನ್ನು ಒಳಗೊಂಡಂತೆ ನಿರ್ಮಾಣ ಮಾಡಲಾಗಿದೆ. ಸಚಿವರ ಮೇಲೆ ಒತ್ತಡ ಹೇರಿ ನುರಿತ ವೈದ್ಯರ ತಂಡ, ಸೂಕ್ತ ಸಿಬ್ಬಂದಿ ನೇಮಕಗೊಳಿಸಲಾಗಿದೆ. ಇಲ್ಲಿ ಹಸು, ಬೆಕ್ಕು, ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಶಸಚಿಕಿತ್ಸೆ ದೊರೆಯಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಅಗತ್ಯ ಚಿಕಿತ್ಸೆ, ಲಸಿಕೆ ಹಾಗೂ ಚುಚ್ಚು ಮದ್ದುಗಳನ್ನು ಕೊಡಿಸಬೇಕು ಎಂದರು.
ಕೃಷಿಕ ಸಮಾಜದ ತಾಲೂಕು ಅಧ್ಯ ಪ್ರಭಾಕರ್​ ರೆಡ್ಡಿ ಮಾತನಾಡಿ, ನಾವು ಮನೆಗಳಲ್ಲಿ ಸಾಕುವ ಸಾಕು ಪ್ರಾಣಿಗಳು ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತವೆ. ನಮ್ಮ ಅರೋಗ್ಯದಂತೆಯೇ ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ತೋರಬೇಕು ಎಂದರು.
ಪಶುಇಲಾಖೆ ಸಹಾಯಕ ನಿರ್ದೇಶಕ ಡಾ. ಮಾರುತಿ ರೆಡ್ಡಿ, ಮುಖಂಡರಾದ ಕೆ.ಎಸ್​.ಅನಂತರಾಜು,
ಕಲೀಮ್​, ಡಿ.ಜೆ.ಚಂದ್ರ ಮೋಹನ್​, ಬ್ಯಾಟರಿ ಜಯರಾಮ್​, ಮಹೇಂದ್ರ ಸೇರಿದಂತೆ ಇನ್ನಿತರ ಮುಖಂಡರು, ರೈತ ಸಂದ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net