ನೀಟ್: ತಮ್ಮದಲ್ಲದ ತಪ್ಪಿಗೆ ಪರೀಕ್ಷೆ ತಪ್ಪಿಸಿಕೊಂಡ ಮೂವರು ವಿದ್ಯಾರ್ಥಿನಿಯರು

ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಪರಿಶೀಲನೆತೆ ಸರತಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿಗಳು.
ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಪರಿಶೀಲನೆತೆ ಸರತಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ತುಂಬಾ ಕಠಿಣವಾಗಿ ರೂಪಿಸಲಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  • ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ರೂಪಿಸಿರುವ ಪ್ರಶ್ನೆಪತ್ರಿಕೆಯು ಅಭ್ಯರ್ಥಿಗಳನ್ನು ಬೆಚ್ಚುಬೀಳುವಂತೆ ಮಾಡಿದೆ
  • ಕೆಲವೆಡೆ ತಡವಾಗಿ ಆಗಮಿಸಿದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ.
  • ವಿದ್ಯಾರ್ಥಿನಿಯೊಬ್ಬರು ಗೇಟ್ ಹಾರುವ ದುಸ್ಸಾಹನ ಮಾಡಿದ ಘಟನೆ ಕೂಡ ಜರುಗಿತು. ಆಕೆಯನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಭಾನುವಾರ ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಆರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮರು ಪರೀಕ್ಷೆಯು ಯಶಸ್ವಿಯಾಗಿ ನಡೆದಿದೆ. ಕೆಲವೆಡೆ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದರೆ, ಮತ್ತೆ ಕೆಲವೆಡೆ ವಸಸಂಹಿತೆ ವಿಚಾರವಾಗಿ ಜಟಾಪಟಿ ನಡೆದಿದೆ.
ಇವೆಲ್ಲದರ ನಡುವೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮಾಡುವ ಜತೆಗೆ ಪ್ರಶ್ನೆಪತ್ರಿಕೆಯನ್ನು ತುಂಬಾ ಕಠಿಣವಾಗಿ ರೂಪಿಸಲಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ರೂಪಿಸಿರುವ ಪ್ರಶ್ನೆಪತ್ರಿಕೆಯು ಅಭ್ಯರ್ಥಿಗಳನ್ನು ಬೆಚ್ಚುಬೀಳುವಂತೆ ಮಾಡಿದೆ ಎಂದು ವಿದ್ಯಾರ್ಥಿ ರಾಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಆರ್.ಸಿ. ಕಾಲೇಜು ಸೇರಿ ಕೆಲವೆಡೆ ತಡವಾಗಿ ಆಗಮಿಸಿದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲು 1.30ರವರೆಗೂ ಸಮಯ ನೀಡಲಾಗಿತ್ತು. ಆದರೆ, ವಿದ್ಯಾರ್ಥಿನಿಯು 1.35ಕ್ಕೆ ಆಗಮಿಸಿದ್ದರಿಂದ ಪ್ರವೇಶ ಕಲ್ಪಿಸಲಿಲ್ಲ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯೊಬ್ಬರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ತಡವಾಯಿತು. ಮತ್ತೊಬ್ಬರು ಬಸ್ ತಪ್ಪಿಸಿಕೊಂಡಿದ್ದರಿಂದ ತಡವಾಗಿದೆ. ಇನ್ನೊಬ್ಬರು ಮೇ ತಿಂಗಳಲ್ಲಿ ನಡೆದಿದ್ದ ಪರೀಕ್ಷೆಯ ಪ್ರವೇಶ ಪರೀಕ್ಷೆ ತಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಒಂದೆರಡು ನಿಮಿಷ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳನ್ನು ಒಳಗೆ ಬಿಡುವಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಮನವಿ ಮಾಡಿದರೂ ಸಿಬ್ಬಂದಿ ಪ್ರವೇಶ ಅವಕಾಶ ಕಲ್ಪಿಸಲಿಲ್ಲ. ವಿದ್ಯಾರ್ಥಿನಿಯೊಬ್ಬರು ಗೇಟ್ ಹಾರುವ ದುಸ್ಸಾಹನ ಮಾಡಿದ ಘಟನೆ ಕೂಡ ಜರುಗಿತು. ಆಕೆಯನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net