ಕೋಲಾರ: ಜಿಲ್ಲೆಯ 11 ಪರೀಕ್ಷಾ ಕೇಂದ್ರದಲ್ಲಿ ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪಾರದರ್ಶಕ, ಹಾಗೂ ಸುರತವಾಗಿ ಭಾನುವಾರ ನಡೆಯಿತು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಿಯಮಾವಳಿಗಳ ಪ್ರಕಾರ ತಲಾ ಒಬ್ಬರಂತೆ ಒಟ್ಟು 11 ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಬ್ಯಾಂಕ್ನಿಂದ ಪ್ರಶ್ನೆ ಪತ್ರಿಕೆಗಳ ಟ್ರಂಕ್ಗಳನ್ನು ಸುರತವಾಗಿ ಸಾಗಿಸಲು ಜಿಲ್ಲಾಡಳಿತದಿಂದಲೇ ವಿಶೇಷ ವಾಹನ ಹಾಗೂ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಾ ಕೇಂದ್ರಗಳಲ್ಲಿ ಎನ್ಟಿಎ ವತಿಯಿಂದಲೇ ನುರಿತ ತಪಾಸಣಾ ತಂಡ ಕಾರ್ಯನಿರ್ವಹಿಸಿ ಹೆಣ್ಣುಮಕ್ಕಳ ತಪಾಸಣೆಗೆ ಪ್ರತ್ಯೇಕ ಸ್ಕ್ರೀನ್ ಹಾಗೂ ಮಹಿಳಾ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿತ್ತು.
ಕೇಂದ್ರಗಳ ಮುಂಭಾಗ ಪೊಲೀಸ್ ಬೀಗಿ ಗೊಳಿಸಲಾಗಿತ್ತು. ಜಿಲ್ಲಾಧಿಕಾರಿ ಎಂ.ಆರ್, ರವಿ, ಅಪರ ಜಿಲ್ಲಾಧಿಕಾರಿ ಮಂಗಳಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.