ಏ.20ರ ಅಕ್ಷಯ ತೃತೀಯಾದಂದು ಹೆಚ್ಚಿನ ಜನ ವ್ಯಾಪಾರ ಮಾಡಿದ್ದರು. ಆಗ ಸ್ಟಾಕ್ ಚೆಕ್ ಮಾಡದೇ ಅಂಗಡಿ ಮುಚ್ಚಿದ್ದೆವು. ಏ.22ರಂದು ಅಂಗಡಿ ತೆಗೆದು ವ್ಯಾಪಾರದ ವಹಿವಾಟು ನೋಡಿದಾಗ ನೆಕ್ಲೆಸ್, ಕಿವಿ ಓಲೆ ಇರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಸುಮಾರು 35 ವರ್ಷದ ಅಪರಿಚಿತ ಮಹಿಳೆಯರಿಬ್ಬರು ವ್ಯಾಪಾರ ಮಾಡುವ ನೆಪದಲ್ಲಿ ಕಳವು ಮಾಡಿ ಪಕ್ಕದಲ್ಲಿದ್ದ ಮತ್ತೊಬ್ಬ ಮಹಿಳೆಯ ಬ್ಯಾಗ್ನಲ್ಲಿ ಹಾಕಿಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ. ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.