ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನದ ಭವನದಲ್ಲಿ ಯೋಗ ದಿನದ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಸೌಪರ್ಣಿಕ ವಲಯ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರಂಭದಲ್ಲಿ ಸಣ್ಣ ಶಾಖೆಯಾಗಿ ಪ್ರಕಟಗೊಂಡ ಸಂಸ್ಥೆ ಇಂದು ದೇಶಾದ್ಯಂತ 1,600ಕ್ಕೂ ಹೆಚ್ಚು ಶಾಖೆಗಳಾಗಿ ಬೆಳೆದಿದೆ. ಎಲ್ಲ ಕಡೆಗಳಲ್ಲೂ ಉಚಿತವಾಗಿ ಯೋಗ ವಿದ್ಯೆ ಧಾರೆ ಎರೆಯಲಾಗುತ್ತಿದೆ. ಸಮಿತಿಯಲ್ಲಿ 6,500ಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಲಕ್ಷಾಂತರ ಯೋಗ ಬಂಧುಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಂಡುಕೊಂಡಿದ್ದಾರೆ.ಯೋಗದಿಂದ ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸದಾ ಚಂಚಲವಾಗಿರುವ ಮನಸ್ಸನ್ನು ಏಕಾಗ್ರತೆಯತ್ತ ತರಲು ಯೋಗ ರಾಮಬಾಣವಾಗಿದೆ.