ಮಹೇಶ ಜೋಶಿ ವಜಾಗೆ ನೇ.ಭ. ಆಗ್ರಹ

ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
Published on

ಪ್ರಮುಖ ಮುಖ್ಯಾಂಶಗಳು

  • * ಮಹೇಶ ಜೋಶಿ ಸದಸ್ಯತ್ವ ಅಮಾನತಿಗೆ ಒತ್ತಾಯ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಡಾ. ಮಹೇಶ ಜೋಶಿ ಅವರು ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಹೇಳಿದ್ದಾರೆ.
ಸಹಕಾರ ಇಲಾಖೆಯ ವಿಚಾರಣಾಧಿಕಾರಿ ವಿಚಾರಣೆಯ ವರದಿಯನ್ನು ಹೈಕೋರ್ಟ್‌ಗೆ ಇನ್ನು ಸಲ್ಲಿಸಿಲ್ಲ. ಬದಲಿಗೆ ವಿಚಾರಣೆ ನಡೆಸುತ್ತಿರುವಾಗಲೇ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಬೇಕೆಂದು ಅವರು ಆಗ್ರಹಿಸಿರುವುದು ಸರಿಯಲ್ಲ. ನಾನು ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅನೇಕ ಕಾಮಗಾರಿಗಳಿಗೆ ಹಣಕಾಸು ಸಮಿತಿ ಅಥವಾ ಕಾರ್ಯಕಾರಿಣಿ ಸಭೆಯ ಒಪ್ಪಿಗೆ ಪಡೆಯದೆ, ವೈಯುಕ್ತಿಕ ನಿರ್ಧಾರದಂತೆ ಕಾಮಗಾರಿಗಳಿಗೆ ಹಣ ಮುಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹೇಶ ಜೋಶಿ ಅವರು, ತಮ್ಮ ತಪ್ಪಿನಿಂದ ಕಸಾಪಕ್ಕೆ ಉಂಟಾಗಿರುವ ಸಂಕಷ್ಟವನ್ನು ಕಾರ್ಯಕಾರಿ ಮತ್ತು ಚುನಾಯಿತ ಜಿಲ್ಲಾಧ್ಯಕ್ಷರ ಹೆಗಲ ಮೇಲೆ ಹೊರಿಸಲು ಪದೇ ಪದೆ ಪ್ರಯತ್ನ ನಡೆಸುತ್ತಿದ್ದಾರೆ. ಹಾಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net