ಸಮೀಪದಲ್ಲೇ ಪ್ರಜಾಸೌಧ ನಿರ್ಮಿಸಿ

ಪ್ರಜಾಸೌಧ ನಿರ್ಮಾಣ ಸ್ಥಳ ಬದಲಾವಣೆ ಮಾಡಲು ಆಗ್ರಹಿಸಿ ಸಾರ್ವಜನಿಕರು ಯರಗಟ್ಟಿ ಪಟ್ಟಣದಲ್ಲಿ ತಹಸೀಲ್ದಾರ್​ ಎಂ.ವಿ.ಗುಡಪ್ಪಗೋಳಗೆ ಮನವಿ ಸಲ್ಲಿಸಿದರು. ರತ್ನಾಕರ ಶೆಟ್ಟಿ ಹಾಗೂ ಅಶೋಕ ಅಂಗಡಿ ಇತರರಿದ್ದರು.
ಪ್ರಜಾಸೌಧ ನಿರ್ಮಾಣ ಸ್ಥಳ ಬದಲಾವಣೆ ಮಾಡಲು ಆಗ್ರಹಿಸಿ ಸಾರ್ವಜನಿಕರು ಯರಗಟ್ಟಿ ಪಟ್ಟಣದಲ್ಲಿ ತಹಸೀಲ್ದಾರ್​ ಎಂ.ವಿ.ಗುಡಪ್ಪಗೋಳಗೆ ಮನವಿ ಸಲ್ಲಿಸಿದರು. ರತ್ನಾಕರ ಶೆಟ್ಟಿ ಹಾಗೂ ಅಶೋಕ ಅಂಗಡಿ ಇತರರಿದ್ದರು.
Published on
ಸಮೀಪದಲ್ಲೇ, ಪ್ರಜಾಸೌಧ, ನಿರ್ಮಿಸಿ, ಯರಗಟ್ಟಿ
ವಿಜಯವಾಣಿ ಸುದ್ದಿಜಾಲ ಯರಗಟ್ಟಿ
ನೂತನ ಯರಗಟ್ಟಿ ತಾಲೂಕಿನಲ್ಲಿ ಆಡಳಿತ ಭವನ ಪ್ರಜಾಸೌಧ ನಿರ್ಮಾಣ ಸ್ಥಳ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ಪ್ರದೇಶದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್​ ಎಂ.ವಿ.ಗುಡಪ್ಪಗೋಳಗೆ ಸಾರ್ವಜನಿಕರು ಬುಧವಾರ ಮನವಿ ಸಲ್ಲಿಸಿದರು.
ರತ್ನಾಕರ ಶೆಟ್ಟಿ ಹಾಗೂ ಅಶೋಕ ಅಂಗಡಿ ಮಾತನಾಡಿ, ಪಟ್ಟಣದಿಂದ 5 ಕಿಮೀ ದೂರದಲ್ಲಿ ತಾಲೂಕು ಆಡಳಿತ ಭವನ ನಿರ್ಮಿಸಿದರೆ ಜನರಿಗೆ ಸಮಸ್ಯೆಯಾಗುತ್ತದೆ. ಈ ಕುರಿತು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಪಟ್ಟಣದಲ್ಲೇ ಬೇರೆ ಜಾಗದಲ್ಲಿ ನಿರ್ಮಿಸಬೇಕು ಎಂದರು.
ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರು ಸಂತೆಯನ್ನು ಗೋಕಾಕ ರಸ್ತೆಯಲ್ಲಿರುವ 8 ಎಕರೆ ಪ್ರದೇಶಕ್ಕೆ ಸ್ಥಳಾಂತರಿಸಿ, ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತದ ಎಲ್ಲ ಕಚೇರಿ ನಿರ್ಮಿಸಬಹುದು. ಗೋಕಾಕ ರಸ್ತೆಯಲ್ಲಿ ಪ್ರಜಾಸೌಧ ನಿರ್ಮಿಸಲು ನಮ್ಮ ವಿರೋಧವಿದೆ. ಆದ್ದರಿಂದ ಅದನ್ನು ಕೈಬಿಟ್ಟು ಬೇರೆ ಸ್ಥಳ ಗುರುತಿಸಬೇಕು. ಇಲ್ಲವಾದಲ್ಲಿ ತಾಲೂಕಿನ ಸಮಸ್ತ ಜನರು ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್​ ಮಾತನಾಡಿ, ಪ್ರಜಾಸೌಧ ನಿರ್ಮಾಣಕ್ಕೆ 8 ಎಕರೆ ಜಾಗ ಗುರುತಿಸಲಾಗಿದೆ. ಸಾರ್ವಜನಿಕರಿಂದ ಬಂದ ಈ ಆೇಪಣೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಪರಿಶೀಲಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಸಂತೋಷ ಹಾದಿಮನಿ, ಶಂಕರ ಮುಗಳಿ, ವೆಂಕಣ್ಣ ಹುರಕನವರ, ಡಿ.ಕೆ.ರಫೀಕ್​, ಸೋಮು ರೈನಾಪುರ, ಕೃಷ್ಣಮೂರ್ತಿ ತೊರಗಲ್​, ಪ್ರವಿಣ ಬೆಣ್ಣಿ, ಮೆಹಬೂಬ್​ ನದ್​ಾ, ಫಿರೋಜ್​ ಖಾದ್ರಿ, ಅಮೀರ್​ ದೇವಡಿ ಇತರರಿದ್ದರು. ಯರಗಟ್ಟಿ ಪಟ್ಟಣದ ಸಮಸ್ಯೆ ಕುರಿತು ಏ.29ರಂದು "ಗ್ರಾಪಂ ಮೇಲ್ದರ್ಜೆ, ಸೌಲಭ್ಯ ಕೆಳದರ್ಜೆಗೆ' ಎಂಬ ಶೀರ್ಷಿಕೆಯಡಿ ವಿಜಯವಾಣಿ ವಿಸತ ವರದಿ ಪ್ರಕಟಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net