ಚಿಕ್ಕೋಡಿ ನಿಸರ್ಗದ ಅಂದಗೆಡಿಸುತ್ತಿರುವ ಕಸ

ಚಿಕ್ಕೋಡಿ ನಿಸರ್ಗದ ಅಂದಗೆಡಿಸುತ್ತಿರುವ ಕಸ
ಚಿಕ್ಕೋಡಿ ನಿಸರ್ಗದ ಅಂದಗೆಡಿಸುತ್ತಿರುವ ಕಸ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿ ನಿಸರ್ಗದ ಅಂದಗೆಡಿಸುತ್ತಿರುವ ಕಸ
  • ಗುಡ್ಡ ಸೇರುತ್ತಿದೆ ತ್ಯಾಜ್ಯ
  • ಪರಿಸರವಾದಿಗಳ ಆಕ್ರೋಶ

ಪರಿಸರಕ್ಕೆ ಮಾರಕವಾಗುತ್ತಿರುವ ತ್ಯಾಜ್ಯ
| ಚಿಕ್ಕೋಡಿ ನಿಸರ್ಗ ಅಂದಗೆಡಿಸಿದ ಕಸ
ಆನಂದ ಭಮ್ಮನ್ನವರ ಚಿಕ್ಕೋಡಿ:

ಚಿಕ್ಕೋಡಿ ಪಟ್ಟಣದ ಸುತ್ತಮುತ್ತಲಿರುವ ಗುಡ್ಡಗಾಡು ಪ್ರದೇಶದ ಪರಿಸರ ಪಟ್ಟಣ ಸೌಂದರ್ಯ ಹೆಚ್ಚಿಸಿದೆ.ಆದರೆ ಇತ್ತಿಚಿನ ದಿನಗಳಲ್ಲಿ ಪಟ್ಟಣದ ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯ ಗುಡ್ಡದ ಪ್ರದೇಶವನ್ನು ಸೇರುವ ಮೂಲಕ ಪರಿಸರಕ್ಕೆ ಹಾನಿವುಂಟು ಮಾಡುತ್ತಿದೆ.
ಪಟ್ಟಣದ ಇಂದಿರಾ ನಗರದ ಹೊರವಲಯದ ಗಣಪತಿ ಗುಡ್ಡ ಎಂದಿಗೂ ಕರೆಸಿಕೊಳ್ಳುವ ಪ್ರದೇಶದಲ್ಲಿ ಗುಡ್ಡದ ಬದಿಯಲ್ಲಿ ಹಾಗೂ ಗುಡ್ಡದ ಮೇಲಿಯು ಕಸದ ರಾಶಿ ಬೀಳುತ್ತಿದೆ. ಈ ಬಗ್ಗೆ ಗಮನ ವಹಿಸಬೇಕಿರುವ ಪುರಸಭೆ ಅಧಿಕಾರಿಗಳು ಜಾನಮೌನವಹಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಸ ವಿಲೇವಾರಿಯೇ ಸವಾಲು:
ಶೈಕ್ಷಣಿಕ ಜಿಲ್ಲಾ ಕೇಂದ್ರವಾಗಿರುವ ಚಿಕ್ಕೋಡಿ ಪಟ್ಟಣದ 23 ವಾರ್ಡ್‌ಗಳಲ್ಲಿ ಕಸ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಸಮರ್ಪಕ ಕಸ ವಿಲೇವಾರಿಯಾಗದ ಹಿನ್ನಲೆ ಸ್ಥಳೀಯ ನಿವಾಸಿಗಳು, ಆಸ್ಪತ್ರೆ, ಹೋಟೆಲ್ ತ್ಯಾಜ್ಯವನ್ನು ಗುಡ್ಡದಂಚಿನಲ್ಲಿ ಹಾಗೂ ಗುಡ್ಡದ ಮೇಲೆಯೇ ಸುರಿಯುವ ಮೂಲಕ ಪರಿಸರದ ಹಾನಿಗೆ ಕಾರಣವಾಗುತ್ತಿವೆ.
ಹಾಳಾದ ಚರಂಡಿಗಳು:
ಚರಂಡಿಗಳು ಹಾಳಾಗುವುದರಿಂದ ತ್ಯಾಜ್ಯ ನೀರು ಸರಾಗವಾಗಿ ತೊಂದರೆಯಾಗುತ್ತಿದೆ. ಇಕ್ಕಟ್ಟಾದ ಚರಂಡಿ ದುರಸ್ತಿಗೆ ಕಾದು ಕುಳಿತಿವೆ. ಇದರೊಂದಿಗೆ ಕಸ ವಿಲೇವಾರಿಯಾಗದೇ ಕಸವು ಚರಂಡಿ ಸೇರುತ್ತದೆ, ಕೆಸಿ ರಸ್ತೆ, ಜಯನಗರ, ಪ್ರಭುವಾಡಿ ಪ್ರದೇಶಗಳಲ್ಲಿ ಜನರು ಮೂಗು ಮುಚ್ಚಿಕೊಂಡು ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೈಕ್ಷಣಿಕ ಜಿಲ್ಲಾ ಕೇಂದ್ರಕ್ಕೆ ಎಲ್ಲಿಂದಲೋ ಕಸ ಬೀಳುತ್ತಿರುವುದು ಕಪ್ಪು ಚುಕ್ಕೆಯಾಗುತ್ತಿದೆ.
ಸ್ವಚ್ಛತೆಗೆ ಆದ್ಯತೆ:
ಮಳೆಗಾಲದಲ್ಲಿ ಎಲ್ಲಿಂದಲೋ ಚರಂಡಿ ನೀರು ನಿಂತು ರೋಗ ರುಜ್ಜುಗಳು ಕಾಣಿಸಿಕೊಳ್ಳುವ ಮೊದಲು ಪಟ್ಟಣದಲ್ಲಿರುವ 23 ವಾರ್ಡ್‌ಗಳಲ್ಲಿ ಸಮರ್ಪಕ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ಚರಂಡಿ ದುರಸ್ತಿಗೆ ಮುಂದಾಗಬೇಕಿದೆ. ಪಟ್ಟಣದಲ್ಲಿರುವ ಜನವಸತಿ ಪ್ರದೇಶದ ಹಾಗೂ ವಿದ್ಯಾರ್ಥಿನಿಲಯಗಳ ಬಳಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಾಕ್ಸ
ಚಿಕ್ಕೋಡಿ ಬಡಾವಣೆ ವಾರ್ಡ್‌ಗಳಲ್ಲಿ ಚರಂಡಿಗಳು ಬಹಳ ಹಳೆಯದಾಗಿದ್ದವು. ಜನಸಂಖ್ಯೆಗೆ ಅನುಗುಣವಾಗಿ ಚರಂಡಿಗಳ ಗಾತ್ರವನ್ನು ಹೆಚ್ಚಿಸಬೇಕಾಗಿದೆ. ಹಾಗೂ ಹೊಸದಾಗಿ ಚರಂಡಿಗಳ ನಿರ್ಮಾಣವಾಗಬೇಕು, ಅದರೊಂದಿಗೆ ಒಳ ಚರಂಡಿಗಳಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುವುದು, ಹೋಟೆಲ್ ಆಹಾರ ತ್ಯಾಜ್ಯದಿಂದ ಯುಜಿಡಿ ಚರಂಡಿಗಳು ಕಟ್ಟಿಕೊಂಡು ಗಬ್ಬು ವಾಸನೆ ಬರುತ್ತಿದೆ. ಈ ಬಗ್ಗೆಯು ಕ್ರಮಕ್ಕೆ ಅಧಿಕಾರಿಗಳು ಮುಂದಾಗುವಂತೆ ಜನರ ಆಗ್ರಹವಾಗಿದೆ.
ಕೋಟ್-
ಪಾಲಿಕೆಯಿಂದ ಎಲ್ಲಿಂದಲಾದರೂ ಕಸ ಎಸೆಯದಂತೆ ಸಾಕಷ್ಟು ಜಾಗೃತಿ ಮೂಡಿಸಿದರು ಜನರು ಸಹಕಾರ ನೀಡುತ್ತಿಲ್ಲ. ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಗುಡ್ಡ ಪ್ರದೇಶದಲ್ಲಿ ಕಸ ತೆಗೆಯುವ ಬಗ್ಗೆ ಕ್ರಮವಹಿಸಲಾಗುವುದು.
ಜಗದೀಶ ಈಟಿ
ಮುಖ್ಯಾಧಿಕಾರಿ,ಪುರಸಭೆ ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net