ಉತ್ತರ ಭಾರತದ ವಲಸಿಗರ ಹಾವಳಿಗೆ ಮೂಲ ನೇಕಾರರು ಅತಂತ್ರ / DODDABALLAPUR

ದೊಡ್ಡಬಳ್ಳಾಪುರದ ಬಾಬು ಜಗಜೀವನ ರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ನೇಕಾರ ಕಾರ್ಮಿಕರ ಸಮಸ್ಯೆಗಳ ಪರಿಹಾರ ಸಭೆಯಲ್ಲಿ  ಶಾಸಕ ಧೀರಜ್​ ಮುನಿರಾಜು,ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸೌಮ್ಯಾ, ಕಾರ್ಮಿಕ ಇಲಾಖೆಯ ಹೇಮಂತ್​, ದಯಾನಂದ್​, ಡಿವೈಎಸ್ಪಿ ರವಿ, ಮುಖಂಡರಾದ ಮಂಜುನಾಥ ಇತರರು ಇದ್ದರು.
ದೊಡ್ಡಬಳ್ಳಾಪುರದ ಬಾಬು ಜಗಜೀವನ ರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ನೇಕಾರ ಕಾರ್ಮಿಕರ ಸಮಸ್ಯೆಗಳ ಪರಿಹಾರ ಸಭೆಯಲ್ಲಿ ಶಾಸಕ ಧೀರಜ್​ ಮುನಿರಾಜು,ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸೌಮ್ಯಾ, ಕಾರ್ಮಿಕ ಇಲಾಖೆಯ ಹೇಮಂತ್​, ದಯಾನಂದ್​, ಡಿವೈಎಸ್ಪಿ ರವಿ, ಮುಖಂಡರಾದ ಮಂಜುನಾಥ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಂದ ಸ್ಥಳಿಯ ನೇಕಾರ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಛತ್ತೀಸ್​ಗಢ, ಜಾರ್ಖಂಡ್​ ಸೇರಿ ಮತ್ತಿತರ ರಾಜ್ಯಗಳಿಂದವಲಸೆ ಬಂದವರು ನೇಯ್ಗೆ ಕಾರ್ಮಿಕರಾಗಿ ಸೇರುತ್ತಿರುವುದರಿಂದ ಇಲ್ಲಿನ ಮೂಲ ನಿವಾಸಿ ಕಾರ್ಮಿಕರು ಅತಂತ್ರಗೊಂಡಿದ್ದಾರೆ. ಇದು. ಸೋಮವಾರ ನಗರದ ಬಾಬು ಜಗಜೀವನ ರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೇಳಿಬಂದ ಮೂಲ ನೇಕಾರ ಕಾರ್ಮಿಕರ ಅಳಲು.
ಮಗ್ಗದ ಮಾಲೀಕರಿಂದ ಕೂಲಿ ಕಡಿತ ಮತ್ತು ಉದ್ಯೋಗ ಕಸಿತ ಎದುರಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಮೂಲ ಕಾರ್ಮಿಕರು ಶಾಸಕ ಧೀರಜ್​ ಮುನಿರಾಜು ಸಮ್ಮುಖದಲ್ಲಿ ಪೊಲೀಸ್​, ಕಾರ್ಮಿಕ ಹಾಗೂ ಜವಳಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಧೀರಜ್​ ಮುನಿರಾಜು ಮಾತನಾಡಿ, ಕಾರ್ಮಿಕ ಹಾಗೂ ಮಾಲೀಕರ ಸಮಸ್ಯೆ ಆಲಿಸಿ ಶಾಶ್ವತ ಪರಿಹಾರ ಹುಡುಕಬೇಕಿದೆ. ಮಾಲೀಕರು ಮತ್ತು ಕಾರ್ಮಿಕರು ಇಬ್ಬರಿಗೂ ಸಮಸ್ಯೆಗಳಿವೆ. ನೇಕಾರರು ನೇಯ್ದ ಸೀರೆಗಳನ್ನು ಸಾಲ ಕೊಟ್ಟು ತಡವಾಗಿ ಬಟವಾಡೆ ಪಡೆಯುತ್ತಿದ್ದಾರೆ. ಸಾಲ ಪಡೆದಾದರೂ ಪ್ರತಿ ಭಾನುವಾರ ಕಾರ್ಮಿಕರಿಗೆ ಬಟವಾಡೆ ಮಾಡುತ್ತಾರೆ. ಮಾಲೀಕರಿಂದ ಸೀರೆ ಖರೀದಿ ಮಾಡಿದ ಬಂಡವಾಳಶಾಹಿ ನಮ್ಮದೇ ಸೀರೆಗೆ ಒಂದು ಬ್ರ್ಯಾಂಡ್​ ಕೊಟ್ಟು ನಮಗೇ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ದೊಡ್ಡಬಳ್ಳಾಪುರದ್ದೇಆದ ಗುರುತರವಾದ ಹೆಸರಿನಲ್ಲಿ ಮಾರುಕಟ್ಟೆ ವಾತಾವರಣ ಸೃಷ್ಟಿಸುವ ಆಲೋಚನೆ ಇದೆ.
ನೇಕಾರರ ಮಾರುಕಟ್ಟೆ ನಿರ್ಮಾಣಕ್ಕಾಗಿ 11 ಗುಂಟೆ ಜಾಗವನ್ನು ಮೀಸಲಿಡಲಾಗಿದೆ. ಭವನ ನಿರ್ಮಿಸಲು ಶಾಸಕರ ಅನುದಾನದಲ್ಲಿ ಒಂದು ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು. ವಲಸೆ ಕಾರ್ಮಿಕರಿಂದಾಗಿ ಕಾರ್ಮಿಕರ ಕೂಲಿ ಕಡಿತ, ಉದ್ಯೋಗ ನಿರಾಕರಣೆ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಮಾರುಕಟ್ಟೆಯಲ್ಲಿ ಸೀರೆಗಳ ಬೆಲೆಯಲ್ಲಿ ಏರಿಳಿತ ಉಂಟಾಗುತ್ತದೆ. ಆ ಬಗ್ಗೆ ಪರಿಶೀಲನೆ ಮಾಡಿ ಕಾರ್ಮಿಕರು ಮತ್ತು ಮಾಲೀಕರ ಜತೆಗೆ ಒಂದು ಸಭೆ ನಡೆಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳೋಣ ಎಂದರು.ನೇಯ್ಗೆ ಕಾರ್ಮಿಕರ ಮುಖಂಡ ಶಂಭು ಶಂಕರ್​ ಮಾತನಾಡಿ, ವಲಸೆ ಕಾರ್ಮಿಕರಿಂದಾಗಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.
ಇಲಾಖೆಯಲ್ಲಿ ನೋಂದಾಯಿಸಿ : ಸರ್ಕಾರ ನೇಯ್ಗೆ ಕಾರ್ಮಿಕರನ್ನು ಅಸಂಟಿತ ಕಾರ್ಮಿಕರಾಗಿ ೂಷಿಸಿ ಗುರುತಿನ ಪತ್ರ ನೀಡುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ ಇತರ ಅಸಂಟಿತ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುತ್ತದೆ. ಸರ್ಕಾರದಿಂದ ನೇಕಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನೇಕಾರ ಸಮ್ಮಾನ್​ ಯೋಜನೆ ಜಾರಿ ಮಾಡಿದೆ. ಇದರ ಅಡಿಯಲ್ಲಿ ಪ್ರತಿ ನೇಕಾರನಿಗೆ ವಾರ್ಷಿಕ ಐದು ಸಾವಿರ ರೂ.ಗಳ ವರೆಗೆ ಸಹಾಯ ಧನ ನೀಡಲಾಗುತ್ತದೆ. ಪ್ರತಿ ನೇಯ್ಗೆ ಕಾರ್ಮಿಕರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಸರ್ಕಾರದ ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net