ಜೂ.28ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

ಜೂ.28ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ
ಜೂ.28ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ
Published on

ಪ್ರಮುಖ ಮುಖ್ಯಾಂಶಗಳು

  • ಜೂ.28ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ
  • ಮಹಾ ಮಾರಿಯ ವಿರುದ್ಧ ನಡೆದಿರುವ ನಿರಂತರ ಹೋರಾಟ
  • ಆರೋಗ್ಯ ಇಲಾಖೆಯ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ

ಬೆಂಗಳೂರು: 5 ವರ್ಷದೊಳಗಿನಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದಜೂ.28 ರಭಾನುವಾರದಂದು ರಾಷ್ಟ್ರೀಯ ಲಸಿಕಾದಿನ (ಪಲ್ಸ್ಪೋಲಿಯೋ)ಹಮ್ಮಿಕೊಳ್ಳಲಾಗಿದೆಎಂದು ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿರಿತ್ವಿಕ್ ಪಾಂಡೆ ತಿಳಿಸಿದ್ದಾರೆ.

ಭಾರತವುಕಳೆದ 14 ವರ್ಷಗಳಿಗೂಮೇಲ್ಪಟ್ಟು ಪೋಲಿಯೊ ಮುಕ್ತರಾಷ್ಟ್ರವಾಗಿದ್ದರೂ,ಜಗತ್ತಿನ ಕೆಲವುಭಾಗಗಳಲ್ಲಿ ಹಾಗೂ ಭಾರತದ ನೆರೆರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋವೈರಸ್ ಹರಡುವಿಕೆ ಇನ್ನೂ ಇರುವುದರಿಂದಮುನ್ನೆಚ್ಚರಿಕೆ ಕ್ರಮವಾಗಿಅಭಿಯಾನವನ್ನು ನಡೆಸಲಾಗುತ್ತಿದೆ.ಮೊದಲು ಜೂ.28 ರಂದು ಪೋಲಿಯೋಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು.ನಂತರ 2-3ದಿನಗಳಲ್ಲಿಆರೋಗ್ಯ ಕಾರ್ಯಕರ್ತರು ಮನೆ ಮನೆಗೆಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆಲಸಿಕೆ ಹಾಕಲಿದ್ದಾರೆ.ವಲಸಿಗ ಸಮುದಾಯದಮಕ್ಕಳು, ಹೆಚ್ಚುಅಪಾಯದಂಚಿನಲ್ಲಿರುವ ಪ್ರದೇಶಗಳುಹಾಗೂ ನಗರ ಪ್ರದೇಶದ ಕೊಳಗೇರಿಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆವಿಶೇಷ ಆದ್ಯತೆ ನೀಡಲಾಗುತ್ತದೆ.

ಈಬೃಹತ್ ಕಾರ್ಯಕ್ರಮವನ್ನುಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳಸಹಕಾರವನ್ನು ಬಯಸಿರುವ ಆರೋಗ್ಯಇಲಾಖೆಯು,ಸಾರ್ವಜನಿಕರುಹಾಗೂ ಪೋಷಕರು ತಮ್ಮ 5ವರ್ಷದೊಳಗಿನಮಕ್ಕಳಿಗೆ ತಪ್ಪದೇ ಪೋಲಿಯೋಹನಿಗಳನ್ನು ಹಾಕಿಸಿ ಸಹಕರಿಸುವಂತೆಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net