ಬೆಂಗಳೂರು: ನವದೆಹಲಿಯ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) 2015 ರಿಂದ ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. 2026 ರಲ್ಲಿ ಸ್ಪರ್ಧೆಯ 12 ನೇ ಆವೃತ್ತಿಗೆ, ದೇಶದ ನಾಗರಿಕರಿಂದ ಆನ್‌ಲೈನ್‌ನಲ್ಲಿ ಪ್ರವೇಶಗಳನ್ನು ಆಹ್ವಾನಿಸಿದೆ. ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಕ್ಕೆ ಬಹುಮಾನದ ಮೊತ್ತವು ಕ್ರಮವಾಗಿ ರೂ. 2 ಲಕ್ಷ, ರೂ. 1 ಲಕ್ಷ 50 ಸಾವಿರ ಮತ್ತು ರೂ. 1 ಲಕ್ಷ ಆಗಿರುತ್ತದೆ. ಆಯೋಗವು ಮೂರು ನಗದು ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳ ಜೊತೆಗೆ, ತೀರ್ಪುಗಾರರು ಶಿಫಾರಸು ಮಾಡಿದ ಗರಿಷ್ಠ ನಾಲ್ಕು (4) ಚಿತ್ರಗಳಿಗೆ ತಲಾ ರೂ. 50 ಸಾವಿರ ನಗದು ಬಹುಮಾನದೊಂದಿಗೆ 'ಪ್ರಮಾಣಪತ್ರ'ವನ್ನು ನೀಡಲಾಗುವುದು.