ದೇಶದ ಆರೋಗ್ಯ ರಕ್ಷಕ ವೈದ್ಯ / VIJAYAPUR

ವಿಜಯಪುರದ ಎ.ಪಿ.ಜೆ. ಅಬ್ದುಲ್​ ಕಲಾಂ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮದೀನಾ ಕ್ಲಿನಿಕ್​ನ ವೈದ್ಯರಾದ ಡಾ.ಮೆಹಬೂಬ್​ ಬಾಷಾ, ಡಾ.ಜಯಚಂದ್ರ ಹಾಗೂ ಡಾ.ಮೆಹಬೂಬ್​ ನವಾಜ್​ ಅವರನ್ನು ಸನ್ಮಾನಿಸಲಾಯಿತು. ಲೀಜನ್​ ಅಧ್ಯಕ್ಷ ಮಾರ್ಕೆಟ್​ ವೆಂಕಟೇಶ್​, ರಾಷ್ಟ್ರೀಯ ಸೀನಿಯರ್​ ಕಾರ್ಯದರ್ಶಿ ಎಂ.ಶಿವಕುಮಾರ್​, ರಾಷ್ಟ್ರೀಯ ತರಬೇತುದಾರೆ ಅನುರಾಧಾ ಇತರರಿದ್ದರು.
ವಿಜಯಪುರದ ಎ.ಪಿ.ಜೆ. ಅಬ್ದುಲ್​ ಕಲಾಂ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮದೀನಾ ಕ್ಲಿನಿಕ್​ನ ವೈದ್ಯರಾದ ಡಾ.ಮೆಹಬೂಬ್​ ಬಾಷಾ, ಡಾ.ಜಯಚಂದ್ರ ಹಾಗೂ ಡಾ.ಮೆಹಬೂಬ್​ ನವಾಜ್​ ಅವರನ್ನು ಸನ್ಮಾನಿಸಲಾಯಿತು. ಲೀಜನ್​ ಅಧ್ಯಕ್ಷ ಮಾರ್ಕೆಟ್​ ವೆಂಕಟೇಶ್​, ರಾಷ್ಟ್ರೀಯ ಸೀನಿಯರ್​ ಕಾರ್ಯದರ್ಶಿ ಎಂ.ಶಿವಕುಮಾರ್​, ರಾಷ್ಟ್ರೀಯ ತರಬೇತುದಾರೆ ಅನುರಾಧಾ ಇತರರಿದ್ದರು.
Published on
ವಿಜಯಪುರ : ವೈದ್ಯರು ಗಡಿಗಳಲ್ಲಿ ನಿಂತು ಹೋರಾಡದಿದ್ದರೂ, ಸಾರ್ವಜನಿಕರ ಜೀವ ಉಳಿಸಲು ಹಾಗೂ ದೇಶದ ಆರೋಗ್ಯ ಸುಧಾರಿಸಲು ಜೀವ ಪಣಕ್ಕಿಟ್ಟು ದುಡಿಯುವ ಸೈನಿಕರಾಗಿದ್ದಾರೆ. ಕೋವಿಡ್​-&19, ಪ್ಲೇಗ್​, ಫ್ಲೂನಂತಹ ಸಾಂಕ್ರಾಮಿಕ ರೋಗಗಳು ಹರಡಿದಾಗ ಸಾರ್ವಜನಿಕರನ್ನು ರಕ್ಷಿಸಲು ವೈದ್ಯರು ಮುಂಚೂಣಿಯಲ್ಲಿರುತ್ತಾರೆ ಎಂದು ಡಾ. ಜಯಚಂದ್ರ ಹೇಳಿದರು.
ಪಟ್ಟಣದ ಎ.ಪಿ.ಜೆ ಅಬ್ದುಲ್​ ಕಲಾಂ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್​ ಚೇಂಬರ್​ ಇಂಟರ್​ ನ್ಯಾಷನಲ್​ ವಿಜಯಪುರ ಲೀಜನ್​ನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನ, ಕನ್ನಡ ಪತ್ರಿಕಾ ದಿನ ಹಾಗೂ ಅಂತಾರಾಷ್ಟ್ರೀಯ ಹಾಸ್ಯ ದಿನಾಚರಣೆಯಲ್ಲಿ ಮಾತನಾಡಿದರು. ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರ್​ ಹಡಪದ್​ ಮಾತನಾಡಿ, ಸಮಾಜದ ಲೋಪದೋಷ ತಿದ್ದಿ, ಜನಸಾಮಾನ್ಯರ ಧ್ವನಿಯಾಗಿ ಮತ್ತು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಜವಾಬ್ದಾರಿಯುತ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ ಎಂದು ಬಣ್ಣಿಸಿದರು.
ಅಂತಾರಾಷ್ಟ್ರೀಯ ಹಾಸ್ಯ ದಿನದ ಕುರಿತು ಸೀನಿಯರ್​ ಚೇಂಬರ್​ ಇಂಟರ್​ ನ್ಯಾಷನಲ್​ನ ರಾಷ್ಟ್ರೀಯ ತರಬೇತುದಾರ ಎಸ್​.ರಮೇಶ್​ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಹಾಸ್ಯಕ್ಕೆ ಸುದೀರ್ಘ ಪರಂಪರೆಯಿದೆ. ಹಾಸ್ಯ ಚಕ್ರವರ್ತಿಗಳಾದ ಬಾಲಕೃಷ್ಣ, ನರಸಿಂಹರಾಜು ಅವರಿಂದ ಆರಂಭವಾದ ಹಾಸ್ಯ ಪರಂಪರೆ ಇಂದಿಗೂ ಮುಂದುವರಿದಿದೆ. ಜೀವನದ ಒತ್ತಡಗಳನ್ನು ಮರೆತು ನಗುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಡಾ.ಮೆಹಬೂಬ್​ ಬಾಷಾ ಮಾತನಾಡಿ, ಇತ್ತೀಚೆಗೆ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ರೋಗಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆರೋಗ್ಯದತ್ತ ಜಾಗೃತಿ ವಹಿಸಬೇಕು. ಪೌಷ್ಟಿಕ ಆಹಾರ ಸೇವನೆ, ದಿನನಿತ್ಯದ ವ್ಯಾಯಾಮ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಆರೋಗ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಮದೀನಾ ಕ್ಲಿನಿಕ್​ನ ವೈದ್ಯರಾದ ಡಾ.ಮೆಹಬೂಬ್​ ಬಾಷಾ, ಡಾ.ಜಯಚಂದ್ರ ಹಾಗೂ ಡಾ.ಮೆಹಬೂಬ್​ ನವಾಜ್​ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಜೆ.ಆರ್​.ಮುನಿವೀರಣ್ಣ, ಕಾರ್ಯದರ್ಶಿ ಎಲ್​.ಐ.ಸಿ.ಆನಂದ್​, ಅಶೋಕ್​, ಸಹ ಕಾರ್ಯದರ್ಶಿ ವೆಂಕಟೇಶ್​ ಮೂರ್ತಿ, ಖಜಾಂಚಿ ಎನ್​ಆರ್​ಎಸ್​ ಬಸವರಾಜ, ಜೆ.ಸಿ.ಐ. ಮಾಜಿ ಅಧ್ಯಕ್ಷ ಎ.ಮಂಜುನಾಥ್​, ವಕೀಲರಾದ ಜಯರಾಮ್​, ರಾಜಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net