ರಾಷ್ಟ್ರೀಯ ಹ್ಯಾಕಥಾನ್​ ಪ್ರಶಸ್ತಿ ವಿತರಣೆ

ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರಾಷ್ಟ್ರೀಯ ಹ್ಯಾಕಥಾನ್​ನಲ್ಲಿ ವಿಜೇತರಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪ್ರಶಸ್ತಿ, ಟ್ರೋಫಿ ವಿತರಿಸಿದರು. ಅರುಲ್​ ಅರವಿಂದ, ಸುಭಜಿತ್​ ದತ್ತ ಗುಪ್ತಾ, ಹ್ಯಾಕಥಾನ್​ ಸಂಯೋಜಕ ಡಾ.ರಾಕೇಶ್​ ಕುಮಾರ್​ ಗೋಧಿ ಇತರರಿದ್ದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರಾಷ್ಟ್ರೀಯ ಹ್ಯಾಕಥಾನ್​ನಲ್ಲಿ ವಿಜೇತರಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪ್ರಶಸ್ತಿ, ಟ್ರೋಫಿ ವಿತರಿಸಿದರು. ಅರುಲ್​ ಅರವಿಂದ, ಸುಭಜಿತ್​ ದತ್ತ ಗುಪ್ತಾ, ಹ್ಯಾಕಥಾನ್​ ಸಂಯೋಜಕ ಡಾ.ರಾಕೇಶ್​ ಕುಮಾರ್​ ಗೋಧಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜನೆ
  • ಕಂಪ್ಯೂಟರ್​ ಸೈನ್ಸ್​ ವಿಭಾಗದ ಸಹಯೋಗ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್​ ಸೈನ್ಸ್​ ವಿಭಾಗ ಇತ್ತೀಚಿಗೆ ಸಿಯುಕೆಸಿಎಸ್​&ಎಐಎಚ್​ಒಎನ್​ ಎಂಬ 24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್​ ಯಶಸ್ವಿಯಾಗಿ ಆಯೋಜಿಸಿತು.
ಉತ್ತರ ಕರ್ನಾಟಕದಲ್ಲಿ ನಡೆದ ಮೊದಲ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್​ ಆಗಿದ್ದು, ಈ ಭಾಗದ ಶೈಕ್ಷಣಿಕ ಹಾಗೂ ತಾಂತ್ರಿಕ ೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿತು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿ ಆವಿಷ್ಕಾರಕರು ಉತ್ಸಾಹದಿಂದ ಭಾಗವಹಿಸಿದ್ದರು. ಅಂತಿಮ ಹಂತಕ್ಕೆ ಆಯ್ಕೆಯಾದ 30 ತಂಡಗಳು ತಂತ್ರಜ್ಞಾನಾಧಾರಿತ ನವೀನ ಪರಿಹಾರ ಪ್ರಸ್ತುತಪಡಿಸಿದವು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, 24 ಗಂಟೆಗಳ ನಿರಂತರ ನವೋದ್ಯಮ ಸವಾಲು ಯಶಸ್ವಿಯಾಗಿ ಆಯೋಜಿಸಿದ್ದ ಕಂಪ್ಯೂಟರ್​ ಸೈನ್ಸ್​ ವಿಭಾಗವನ್ನು ಅಭಿನಂದಿಸಿ, ವಿಜೇತರಿಗೆ ಶುಭಾಶಯ ತಿಳಿಸಿದರು. ವಿಜೇತ ತಂಡಗಳಿಗೆ ಪ್ರಮಾಣಪತ್ರ, ಟ್ರೋಫಿ ಮತ್ತು ಉಡುಗೊರೆ ಪ್ಯಾಕ್​ ವಿತರಿಸಿದರು.
ಚೆನೈ ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಲುಮಿನಾಕ್ಸ್​ ತಂಡದ ನಾಯಕ ಅರುಲ್​ ಅರವಿಂದ್​ ಹಾಗೂ ತಂಡದ ಸದಸ್ಯರಾದ ಅಜಯಕುಮಾರ್​, ಹರೀಶ್​ ಮತ್ತು ಅಶ್ವಥ್​ ಅವರೊಂದಿಗೆ ಚಾಂಪಿಯನ್​ ಪಟ್ಟ ಗೆದ್ದು 20,000 ನಗದು ಬಹುಮಾನ ಹಾಗೂ ಸ್ಮರಣಿಕೆ ಪಡೆದರು. ರನ್ನರ್​&ಅಪ್​ ಸ್ಥಾನವನ್ನು ವಿಐಟಿ ವೆಲ್ಲೂರಿನ ದಿ ಡಸರ್ಟ್​ ವೈಪ್ಸ್​ ತಂಡ ಪಡೆದುಕೊಂಡು ತಂಡದ ನಾಯಕ ಸುಭಜಿತ್​ ದತ್ತ ಗುಪ್ತಾ ಮತ್ತು ತಂಡದ ಸದಸ್ಯ ಧ್ರುವ್​ ಹರೀಶ್​ ಅವರಿಗೆ 10,000 ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಯಿತು.
ಡೊಮೇನ್​ ವಿಜೇತ ಪ್ರಶಸ್ತಿ ಪಡೆದ ವಿವಿಧ ತಂಡಗಳಿಗೆ ತಲಾ 5,000 ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮ್ಯಾಟ್​ಲ್ಯಾಬ್​, ಅನ್​ಸ್ಟಾಪ್​ ಗೂಡೀಸ್​ ವಿತರಿಸಲಾಯಿತು.
ಹ್ಯಾಕಥಾನ್​ ಸಂಯೋಜಕ ಡಾ.ರಾಕೇಶ್​ ಕುಮಾರ್​ ಗೋಧಿ ಅವರು ಉದ್ದೇಶ ವಿವರಿಸಿ, ನೈಜ ಸಮಯದ ಸಮಸ್ಯೆ ಪರಿಹಾರ, ನವೀನತೆ ಮತ್ತು ಅಂತರ್​ಶಾಖಾ ಸಹಕಾರದ ಮಹತ್ವ ಒತ್ತಿ ಹೇಳಿದರು.
ಶಿಖರ ಸಮ್ಮೇಳನದ ನೋಡಲ್​ ಅಧಿಕಾರಿ ಡಾ.ನಾಗರಾಜ ಧಾರವಾಡಕರ್​ ಅವರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು, ಸಮ್ಮೇಳನದ ಸಮನ್ವಯ ಮತ್ತು ಕಾರ್ಯಕ್ರಮದ ಸುಗಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರೊ.ಶ್ರೀಕಂಠಯ್ಯ ವಂದಿಸಿದರು.
"

ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನ ಅಳವಡಿಸಿಕೊಂಡು, ಉದ್ಯಮಶೀಲತೆ ಬೆಳೆಸಿ, ವಿಕಸಿತ ಭಾರತ&2047 ದೃಷ್ಟಿಕೋನಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಬೇಕು.

ಪ್ರೊ.ಬಟ್ಟು ಸತ್ಯನಾರಾಯಣ,

ಕುಲಪತಿ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net