ಜಲಮಾಲಿನ್ಯ ತಗ್ಗಿಸಲು ಸಿಎಂಗೆ ನರೇಂದ್ರಸ್ವಾಮಿ ಮನವಿ; ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣ ಗುರಿ

ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದಲ್ಲಿ ಪರಿಸರವಾದಿಗಳಿಗೆ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕೆಎಸ್‌ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮತ್ತಿತರರಿದ್ದರು.
ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದಲ್ಲಿ ಪರಿಸರವಾದಿಗಳಿಗೆ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕೆಎಸ್‌ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಲಮಾಲಿನ್ಯ ತಡೆಗಟ್ಟಲು ಸಿಎಂಗೆ ಮನವಿ
  • ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣ ಗುರಿ
  • ಕೆಎಸ್‌ಪಿಸಿಬಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ

ಬೆಂಗಳೂರು: ಬಹುತೇಕಜಿಲ್ಲೆಗಳಲ್ಲಿ ತ್ಯಾಜ್ಯ ನೀರುನಿರ್ವಹಣಾ ಘಟಕಗಳು ಸರಿಯಾಗಿಕೆಲಸ ಮಾಡದೆ ಕೊಳಚೆ ನೀರು ನದಿಸೇರುತ್ತಿದೆ.ಇದನ್ನು ತಡೆಯಲುಕ್ರಮ ಕೈಗೊಳ್ಳುವಂತೆ ಎಲ್ಲಾಜಿಲ್ಲಾಡಳಿತ ಮತ್ತು ಸ್ಥಳೀಯಸಂಸ್ಥೆಗಳಿಗೆ ಸೂಚನೆ ನೀಡಬೇಕೆಂದುಸಿಎಂ ಸಿದ್ದರಾಮಯ್ಯ ಅವರಿಗೆಕೆಎಸ್‌ಪಿಸಿಬಿ ಅಧ್ಯಕ್ಷಪಿ.ಎಂ.ನರೇಂದ್ರಸ್ವಾಮಿಮನವಿ ಮಾಡಿದರು.

ಕೆಎಸ್‌ಪಿಸಿಬಿಸುವರ್ಣ ಮಹೋತ್ಸವ ಸಮಾರಂಭದಲ್ಲಿಪ್ರಾಸ್ತಾವಿಕವಾಗಿ ಮಾತನಾಡಿದಅವರು, ಜಲಮಾಲಿನ್ಯ ತಡೆಯಲು ಮಂಡಳಿಯುರಾಜ್ಯದಲ್ಲಿರುವ ನದಿ ನೀರು ಮಾಪನಕೇಂದ್ರಗಳನ್ನು ಹೆಚ್ಚಿಸಲುನಿರ್ಧರಿಸಿದೆ.ದ.ಕನ್ನಡಜಿಲ್ಲೆಯಲ್ಲಿ ತ್ಯಾಜ್ಯದಿಂದರಸ್ತೆ ನಿರ್ಮಾಣ ಮಾಡುವ ಆವಿಷ್ಕಾರಮಾಡಲಾಗಿದೆ.ಇದೇ ರೀತಿ ಎಲ್ಲಾಜಿಲ್ಲೆಗಳಲ್ಲೂ ತ್ಯಾಜ್ಯವನ್ನುಸಮರ್ಪಕವಾಗಿ ಮರುಬಳಕೆ ಮಾಡಬೇಕು.ದಾವಣಗೆರೆಜಿಲ್ಲೆಯಲ್ಲಿ ಗೃಹ ಬಳಕೆಯಪ್ಲಾಸ್ಟಿಕ್ ತ್ಯಾಜ್ಯವನ್ನುಸಂಗ್ರಹಿಸಿ ಸಂಸ್ಕರಿಸಲಾಗುತ್ತಿದೆ.ಇದು ರಾಜ್ಯಕ್ಕೆಮಾದರಿಯಾಗಬೇಕು.ಪರಿಸರ ಸಂರಕ್ಷಣೆಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು,ಮಂಡಳಿಯನ್ನುಪ್ರತಿ ಹಳ್ಳಿಗೆ ಕೊಂಡೊಯ್ಯುವುದುಮತ್ತು ಮಂಡಳಿ ಸ್ಥಾಪನೆಗೆಕಾರಣಕರ್ತರಾದ ಇಂದಿರಾ ಗಾಂಧಿಯವರನ್ನು ಸ್ಮರಿಸುವುದು ಸುವರ್ಣ ಮಹೋತ್ಸವದಉದ್ದೇಶ ಎಂದರು.

ಸಾಲುಮರದತಿಮ್ಮಕ್ಕ ಹೆಸರಲ್ಲಿ 1ಕೋಟಿ ದತ್ತಿನಿಧಿ

ಪರಿಸರಸಂರಕ್ಷಣೆ ಜೊತೆಗೆ ಗಿಡಮರಗಳನ್ನುನೆಟ್ಟು ಪರಿಸರ ಕಾಳಜಿಗೈದ ವೃಕ್ಷಮಾತೆಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿಪ್ರಶಸ್ತಿ ನೀಡಲು 1ಕೋಟಿ ರೂ.ದತ್ತಿ ನಿಧಿಸ್ಥಾಪಿಸಲು ಅನುಮತಿ ನೀಡುವಂತೆಸಿಎಂ ಸಿದ್ದರಾಮಯ್ಯ ಅವರನ್ನುವಿನಂತಿಸಿದ ನರೇಂದ್ರ ಸ್ವಾಮಿ,ದತ್ತಿ ಹಣದಿಂದಬರುವ ಬಡ್ಡಿಯಲ್ಲಿ ಪ್ರಶಸ್ತಿನೀಡುವ ಇಂಗಿತ ವ್ಯಕ್ತಪಡಿಸಿದರು.ಇದ್ದಕೆ ಸಿಎಂಅನುಮೋದನೆ ನೀಡಿದರು. ಸಮಾರಂಭದ ಮೊದಲಿಗೆಒಂದು ನಿಮಿಷದ ಮೌನಾಚಾರಣೆ ಮಾಡಿತಿಮ್ಮಕ್ಕನಿಗೆ ಶ್ರದ್ಧಾಂಜಲಿಸಲ್ಲಿಸಲಾಯಿತು.

ಇಂದಿರಾಪ್ರಿಯದರ್ಶಿನಿ ಪರಿಸರ ಪ್ರಶಸ್ತಿ

ಪರಿಸರಕಾಳಜಿಯಲ್ಲಿ ಸಾಧನೆಗೈದಪರಿಸರವಾದಿಗಳಿಗೆ ಮಂಡಳಿ ವತಿಯಿಂದಇಂದಿರಾ ಪ್ರಿಯದರ್ಶಿನಿ ಪರಿಸರಪ್ರಶಸ್ತಿ ವಿತರಣೆ ಮಾಡಲಾಯಿತು.ಕೆರೆ ಸಂರಕ್ಷಣೆ,ಅರಣ್ಯ ವೃದ್ಧಿ,ಪ್ಲಾಸ್ಟಿಕ್ಮುಕ್ತ ಸಮಾಜ ನಿರ್ಮಾಣದಲ್ಲಿಸಾಧನೆಗೈದ ವ್ಯಕ್ತಿಗಳು,ಸಂಸ್ಥೆ ಮತ್ತುಜಿಲ್ಲಾಡಳಿತಕ್ಕೆ ರಾಜ್ಯಮಟ್ಟದಐದು ಪ್ರಶಸ್ತಿ ಜೊತೆಗೆ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ವಿತರಣೆಮಾಡಲಾಯಿತು.ವಿಧಾನಸಭಾಕ್ಷೇತ್ರವಾರು ಬಹುಮಾನ ವಿತರಣೆಮೂಲಕ ಪರಿಸರ ಸಂರಕ್ಷಣೆಗೆ ಸ್ಪೂರ್ತಿತುಂಬಲಾಯಿತು.ಪರಿಸರದ ಬಗ್ಗೆರೀಲ್ಸ್ ಮಾಡಿ ಬಹುಮಾನ ಗೆಲ್ಲಿಎಂಬ ಸ್ಪರ್ಧೆಯಲ್ಲಿ ಗೆದ್ದವರಿಗೆಬಹುಮಾನ ವಿತರಿಸಲಾಯಿತು. 

 1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್‌ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಜೊತೆ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚನೆ, ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1973ರಲ್ಲಿ ಪ್ರಾಜೆಕ್ಟೃ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆ, 1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1986ರಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ ಮತ್ತು 1989ರಲ್ಲಿ ರಾಷ್ಟ್ರೀಯ ಅರಣ್ಯ ನೀತಿ ಜಾರಿಗೆ ತಂದರು. 2005ರಲ್ಲಿ ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರ ಒತ್ತಾಸೆಯಂತೆ ಅರಣ್ಯ ಹಕ್ಕು ಕಾಯ್ದೆ ಮತ್ತು 2011ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸ್ಥಾಪನೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net