ನಾಗೇಶ್ವರ ಸ್ವಾಮಿ ರಥೋತ್ಸವ ಸಂಪನ್ನ / ANEKAL

ಹೆನ್ನಾಗರ ಗ್ರಾಮದ ನಾಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು.
ಹೆನ್ನಾಗರ ಗ್ರಾಮದ ನಾಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು.
Published on
ಆನೇಕಲ್​: ಹೆನ್ನಾಗರ ಗ್ರಾಮದ ನಾಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು. ಬೆಂಗಳೂರು ದಣ ವಿಧಾನ ಸಭಾ ೇತ್ರದ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಾಗರ ಗ್ರಾಮದ ಇತಿಹಾಸ ಪ್ರಸಿದ್ದ ದೇವಾಲಯವಾದ ನಾಗೇಶ್ವರ ಸ್ವಾಮಿ ರಥವನ್ನು ಭಕ್ತರು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥೋತ್ಸವದ ಅಂಗವಾಗಿ ವೀರಗಾಸೆ, ಬೊಂಬೆ ಕುಣಿತ, ತಮಟೆ ವಾದ್ಯ ಸೇರಿದಂತೆ ಹಲವು ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಗ್ರಾಮಸ್ಥರು ಎಲ್ಲರೂ ಒಟ್ಟಿಗೆ ಕೈಯಿಂದ ರಥವನ್ನು ಎಳೆದ ದೃಶ್ಯ ಕಂಡು ಬಂತು, ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ದಾರಿಯುದ್ದಕ್ಕೂ ಅರವಂಟಿಕೆ ಮತ್ತು ಅನ್ನದಾಸೋಹ ಕುಟೀರಗಳನ್ನು ಆಯೋಜಿಸಲಾಗಿತ್ತು ಮತ್ತು ದೇವಾಲಯಕ್ಕೆ ಹಾಗೂ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತೇರು ಗ್ರಾಮದ ರಸ್ತೆಗಳಲ್ಲಿ ಸಾಗುತ್ತಿದ್ದಂತೆ ಬಾಳೆಹಣ್ಣು ಹಾಗೂ ದವನವನ್ನು ಎಸೆದು ಭಕ್ತರು ಭಕ್ತಿಯನ್ನು ಸಮರ್ಪಿಸಿದರು.
ರಾಜಾಪುರ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಸಂಸ್ಥಾನ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸ್ಥಳಿಯರಾದ ಪ್ರಸನ್ನ ಕುಮಾರ, ಜನಪ್ರತಿನಿಧಿಗಳು, ಗಣ್ಯರು ಹಾಗೂ ಗ್ರಾಮಸ್ಥರು, ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net