

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಯಲಹಂಕದಲ್ಲಿರುವನಾಗಾರ್ಜುನ ಶಾಲೆಯಲ್ಲಿ 30ನೇವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನುನಾಲ್ಕು ದಿನಗಳ ಸಡಗರ ಸಂಭ್ರಮದಿಂದಆಚರಿಸಲಾಯಿತು.ಶಿಕ್ಷಣದಲ್ಲಿ30 ವರ್ಷದಅದ್ಭುತ ಸಾಧನೆಗಳ ಪಯಣವನ್ನುಸಂಭ್ರಮಿಸುತ್ತಿರುವ ನಾಗಾರ್ಜುನವಿದ್ಯಾನಿಕೇತನ ಶಾಲೆಯು ವಾರ್ಷಿಕೋತ್ಸವಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿಆಯೋಜಿಸಿತ್ತು.
ಕಾರ್ಯಕ್ರಮವನ್ನುನಾಗಾರ್ಜುನ ಶಿಕ್ಷಣ ಸಂಸ್ಥೆಯಸಂಸ್ಥಾಪಕರಾದ ಜೆ.ವಿ.ರಂಗರಾಜುಮತ್ತು ಶ್ರೀದೇವಿ ರಂಗರಾಜು ದೀಪಬೆಳಗುವ ಮೂಲಕ ಉದ್ಘಾಟಿಸಿದರು.ಪ್ರಾಂಶುಪಾಲೆಮಿಥಾಲಿ ಅರ್ಚಿತ್ ಉಪಸ್ಥಿತರಿದ್ದರು.
ಪ್ರತಿವರ್ಷಒಂದೊಂದು ವಿಷಯವನ್ನು ಕುರಿತುಮಕ್ಕಳಲ್ಲಿ ಕುತೂಹಲವನ್ನುಮೂಡಿಸುವಂತೆ ಈ ವರ್ಷದ ಮುಖ್ಯವಿಷಯ ನಾವೇಕೆ ಬದುಕುತ್ತೇವೆ? ಬದುಕಿನ ಸಂಭ್ರಮಏಕೆ? ಎಂಬುದಾಗಿತ್ತು.ಮಕ್ಕಳಿಗೆಕುತೂಹಲದ ಜೊತೆಗೆ ಮಾನವೀಯತೆ,ಸಂಸ್ಕೃತಿ ಹಾಗೂಸಮಗ್ರ ಶಿಕ್ಷಣವನ್ನು ಬೆಳಸುವಲ್ಲಿಶಾಲೆಯ ಬದ್ಧತೆಯನ್ನು ಪ್ರತಿಬಿಂಬಿಸಲಾಯಿತು.ಉದ್ದೇಶ ದಿವಿಂಗ್ಸ್ ವಿಥಿನ್ ಎಂಬ ಶೀರ್ಷಿಕೆಯೊಂದಿಗೆವಾರ್ಷಿಕೋತ್ಸವ ಕಾರ್ಯಕ್ರಮವುಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿಮಕ್ಕಳು ವಿವಿಧ ಸಾಂಸ್ಕೃತಿಕಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದರೊಂದಿಗೆತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.ವಿದ್ಯಾರ್ಥಿಗಳುತಮ್ಮ ಕಲಾತ್ಮಕತೆ,ಆತ್ಮವಿಶ್ವಾಸಹಾಗೂ ಮೌಲ್ಯಗಳನ್ನು ನೃತ್ಯ,ನಾಟಕ ಮತ್ತುಸಂಗೀತದ ಮೂಲಕ ಅದ್ಭುತವಾಗಿಪ್ರದರ್ಶಿಸಿದರು.
ಮುಖ್ಯಅತಿಥಿಗಳು ತಮ್ಮ ಸಂದೇಶದಲ್ಲಿಮೌಲ್ಯಾಧಾರಿತ ಶಿಕ್ಷಣ ಮತ್ತುಮಕ್ಕಳ ಭವಿಷ್ಯ ನಿರ್ಮಾಣದಲ್ಲಿಕುಟುಂಬ ಮತ್ತು ಶಾಲೆಯ ಪಾತ್ರದಮಹತ್ವವನ್ನು ಒತ್ತಿ ಹೇಳಿದರು.
ನಾಲ್ಕುದಿನಗಳು ನಡೆದ ವಾರ್ಷಿಕೋತ್ಸವಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಪ್ರಸಿದ್ಧ ಶಾಸ್ತ್ರೀಯ ಗಾಯಕಿಮಾನಸಿ ಪ್ರಸಾದ್,ಮೇಜರ್ ರಾಜಶೇಖರ್,ವಿಂಗ್ ಕಮಾಂಡರ್ನಾಗನಾಥನ್ ಪಾಲ್ಗೊಂಡಿದ್ದರು.ಮೇರಿ ಜೋಸೆಫ್,ಸೌಜನ್ಯ,ಶೋಭಾ ಭಟ್ಉಪಸ್ಥಿತರಿದ್ದರು.