ನಾಟಕಕಾರ ಪ್ರಕಾಶ್ ಬೆಳವಾಡಿ ಮಾತನಾಡಿ, ಇನ್‌ಸೈಡರ್ ಕ್ರಿಟಿಕ್ ಎನ್ನುವುದು ಎಲ್ಲಿಂದಲೋ ಯುರೋಪಿನಿಂದ ಬಂದ ಚಿಂತನೆಯಲ್ಲ. ಭಾರತೀಯ ಸಂಸ್ಕೃತಿಯಲ್ಲೇ ಇದರ ಕುರುಹು ಇದೆ. ಅಂಬೇಡ್ಕರ್ ಅವರ ಅನುಯಾಯಿಗಳು ಅವರನ್ನು ಜಾತಿವಾದದಲ್ಲಿ ಬಂಧಿಸಿಟ್ಟಿದ್ದಾರೆ. ಮೊದಲಿಗೆ ಅಂಬೇಡ್ಕರರನ್ನು ಬಿಡುಗಡೆಗೊಳಿಸಬೇಕು. ಜಾತಿ ವಿನಾಶದ ಹೆಸರಿನಲ್ಲಿ ಅಂಬೇಡ್ಕರರನ್ನು, ಬಸವಣ್ಣನವರನ್ನು ನಾವೆಲ್ಲರೂ ಸೇರಿ ಸೋಲಿಸಿದ್ದೇವೆ. ಆರ್ಥಿಕತೆ, ಭಾಷಾವಾರು ಪ್ರಾಂತ್ಯಗಳು ಸೇರಿ ಇನ್ನಿತರ ವಿಚಾರಗಳಲ್ಲಾದರೂ ಅವರನ್ನು ಸರಿಯಾಗಿ ಅರಿಯಬೇಕಾಗಿದೆ. ಅಂಬೇಡ್ಕರ್ ಅವರನ್ನು ಸಮಗ್ರವಾಗಿ ನೋಡಬೇಕೆ ವಿನಃ ಆಯ್ಕೆ ಮಾಡಿಕೊಂಡು ಮಾತನಾಡಬಾರದು ಎಂದರು.