ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ

ಸೇಡಂ ಕಾಂಗ್ರೆಸ್​ ಕಚೇರಿಯಲ್ಲಿ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಜನ್ಮದಿನದ ಶುಭಕೋರಿದರು.
ಸೇಡಂ ಕಾಂಗ್ರೆಸ್​ ಕಚೇರಿಯಲ್ಲಿ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಜನ್ಮದಿನದ ಶುಭಕೋರಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶರಣಪ್ರಕಾಶ ಪಾಟೀಲ್​ ಹೇಳಿಕೆ
  • ಸೇಡಂನಲ್ಲಿ ಕಾರ್ಯಕರ್ತರಿಂದ ಜನ್ಮದಿನ ಕಾರ್ಯಕ್ರಮ
ಸೇಡಂ
ೇತ್ರದ ಜನತೆ ನಾಲ್ಕು ಬಾರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದು, ೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಗುರಿಯಾಗಿದೆ ಎಂದು ವೈದ್ಯಕಿಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಊಡಗಿ ಹೇಳಿದರು.
ಬ್ಲಾಕ್​ ಕಾಂಗ್ರೆಸ್​ ಕಚೇರಿಯಲ್ಲಿ ಜನ್ಮದಿನದ ನಿಮಿತ್ತ ಸೋಮವಾರ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕಳೆದ ಸುಮಾರು 20ಕ್ಕೂ ಅಧಿಕ ವರ್ಷಗಳಿಂದ ೇತ್ರದಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದು, ಇಲ್ಲಿನ ಜನರ ಪ್ರೀತಿ& ಆಶಿರ್ವಾದದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು.
ಹಗಲು ರಾತ್ರಿ ಎನ್ನದೆ ಪ್ರಾಮಾಣಿಕ ಕೆಲಸ ಮಾಡುವ ಕಾರ್ಯಕರ್ತರ ಪಡೆ ನನ್ನೊಂದಿಗಿದೆ. ಹೀಗಾಗಿ ಅವರನ್ನು ನಾನು ಎಂದಿಗೂ ಮರೆಯಲಾಗದು. ನನ್ನ ಮೇಲೆ ವಿಶ್ವಾಸವಿಟ್ಟ ಜನರಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತಿದ್ದೇನೆ. ಪಕ್ಷ ನೀಡಿದ ಜವಬ್ದಾರಿ ಶ್ರದ್ಧೆಯಿಂದ ನಿಭಾಯಿಸಿ ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಿದ್ದೇನೆ. ಪ್ರಾಮಾಣಿಕ ಸೇವೆ ಮುಂದುವರೆಯಲಿದ್ದು, ಜನರ ನಂಬಿಕೆ ಉಳಿಸಿಕೊಂಡು ಹೋಗುವೆ ಎಂದು ಹೇಳಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್​, ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಶಂಕರಭೂಪಾಲ ಪಾಟೀಲ್​, ಕೆಡಿಪಿ ಸದಸ್ಯ ಶರಣಗೌಡ ನಾಚವಾರ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಅಬ್ದುಲ್​ ಗಫೂರ್​, ಸೈಯದ್​ ನಜಿಮೋದ್ದಿನ್​, ಮಹ್ಮದ್​ ಅಜರೋದ್ದಿನ್​, ಮೆಹಮೂದ್​ ಮದನಾ, ಶ್ರೀನಿವಾಸ ಸಂಗಾವಿ, ಅಶೋಕ ಕಡಚರ್ಲಾ, ರಮೇಶ ಕಂದೂರ, ಶಾಭೋದ್ದಿನ್​ ಸಂಗಾವಿ, ಭೀಮಶಪ್ಪ ಮೋತಕಪಲ್ಲಿ, ಹಣಮಂತ ಯಾದವ್​, ನೀರಜಾ ಕುಲಕರ್ಣಿ, ಶೋಭಾ ವಾಲೀಕಾರ, ವಿಷ್ಣುವರ್ಧನರೆಡ್ಡಿ, ಜೈಭೀಮ ಊಡಗಿ, ಮಲ್ಲಿಕಾರ್ಜುನ ಆಡಕಿ, ಚನ್ನಬಸಪ್ಪ ಹಾಗರಗಿ, ವಿಲಾಸಗೌತಂ ನಿಡಗುಂದಾ, ಪ್ರಶಾಂತ ಸೇಡಂಕರ್​ ಇತರರಿದ್ದರು.
ಅಣವೀರಪ್ಪ ದೇಸಾಯಿ, ಕಾಂಗ್ರೆಸ್​ ಮುಖಂಡರು
ಡಾ.ಶರಣಪ್ರಕಾಶ ಪಾಟೀಲ್​ ಅವರು ಜನಪರ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಹೆಚ್ಚಿನ ಅಂತರದಿಂದ ಜನ ಗೆಲ್ಲಿಸಿ ಅಧಿಕಾರ ನೀಡಿದ್ದಾರೆ. ಸಚಿವರಾಗಿ ೇತ್ರದಲ್ಲಿ ಸದ್ದಿಲ್ಲದೆ ಅಭಿವೃದ್ಧಿ ಕೆಲಸ ಮಾಡಿಕೊಂಡು ಸಾಗುತ್ತಿದ್ದಾರೆ.
ಅನ್ನ ದಾಸೋಹ, ಶ್ರವಣ ಸಾಧನಯಂತ್ರ ವಿತರಣೆ
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರ ಜನ್ಮದಿನದ ನಿಮಿತ್ತ ಅಭಿಮಾನಿ ಬಳಗದಿಂದ ಕಿವಿ ಕೇಳದ 25 ಜನರಿಗೆ ಶ್ರವಣ ಸಾಧನಯಂತ್ರ ವಿತರಣೆ ಮಾಡಲಾಯಿತು. ಅಲ್ಲದೆ ಬಸವೇಶ್ವರ ವೃತದಲ್ಲಿ ಬೆಳೆಗ್ಗೆಯಿಂದ ಸಾವಿರಾರು ಜನರಿಗೆ ಅನ್ನ ದಾಸೋಹ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net