ಸಾಂಸತಿಕ ಕಾರ್ಯಕ್ರಮ : ಶ್ರೀ ಮುತ್ಯಾಲಮ್ಮ ಸಾಂಸತಿಕ ಸೇವಾ ಸಮಿತಿಯಿಂದ ವಿವಿಧ ಸಾಂಸತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡೊಳ್ಳುಕುಣಿತ, ಶಿವತಾಂಡವ, ವೀರಗಾಸೆ, ಭದ್ರಕಾಳಿ, ಗಾರುಡಿ ಗೊಂಬೆಗಳು, ಮರಗಾಲು ಮನುಷ್ಯ, ವೀರಭದ್ರನ ಕುಣಿತ, ಪೂಜಾ ಕುಣಿತ, ತಮಟೆ, ಡ್ರಮ್ಸ್ ಸೇರಿ ಹಲವು ತಂಡಗಳು ಪಾಲ್ಗೊಂಡಿದ್ದವು. ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಇಡೀ ಆವರಣವನ್ನು ವಿದ್ಯುದ್ದೀಪಾಲಂಕಾರದಿಂದ ಆಕರ್ಷಣೀಯಗೊಳಿಸಲಾಗಿತ್ತು.