ಕಾಳಗಿ: ಮಳೆ ಕೊರತೆಯಿಂದ ರೈತರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಿ ಫಸಲು ಬರಲಿ ಎಂದು ಪ್ರಾರ್ಥಿಸಿ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಭಾನುವಾರ ವಿಶೇಷ ನಮಾಜ್ ಮಾಡಿದರು. ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ, ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲಿ, ಜನಜೀವನ ಸುಧಾರಿಸಲಿ ಹಾಗೂ ಎಲ್ಲೆಡೆ ಸುಖ-ಶಾಂತಿ ನೆಲೆಸಲಿ ಎಂದು ಸಾಮೂಹಿಕವಾಗಿ ಅಲ್ಲಾನಲ್ಲಿ ಪ್ರಾರ್ಥನೆ ಮಾಡಲಾಯಿತು. ಗೌಸ್ ಮೌಲಾನಾ, ಮಹ್ಮದ್ ಗುಡುಸಾಬ್, ಇಬ್ರಾಹಿಂ ಪಾಶಾ ಗಿರಣಿಕರ್, ಮುನೀರ್ಬೇಗ್ ಬಿಜಾಪುರ, ಸಾದೀಕ್ಮಿಯ್ಯ ಗಾಡಿವಾನ, ಮಂಜೂರ ಹಳಿಕಚೇರಿ, ರಸೀದ್ ಹರಸೂರ, ಇಬ್ರಾಹಿಂ ಅತ್ತರ್, ಖಲೀಲ್ ಖುರೇಶಿ, ಮೈಮೂದ್ ಕಂಚಗಾರ, ಪಾಶಾಬೇಗ್ ಬಿಜಾಪುರ ಇತರರಿದ್ದರು.