ಸಂಗೀತ ಮನಸ್ಸಿನ ಭಾವನೆ ವ್ಯಕ್ತ ಪಡಿಸುವ ಸಾಧನ

ಅಂಗಡಿ ಶಾಲೆಯಲ್ಲಿ ಸಂಗೀತ ಶಾಲೆ ಉದ್ಘಾಟನೆ
ಅಂಗಡಿ ಶಾಲೆಯಲ್ಲಿ ಸಂಗೀತ ಶಾಲೆ ಉದ್ಘಾಟನೆ
Published on

ಪ್ರಮುಖ ಮುಖ್ಯಾಂಶಗಳು

  • ಸಂಗೀತ ಮನಸ್ಸಿನ ಭಾವನೆ ವ್ಯಕ್ತ ಪಡಿಸುವ ಸಾಧನ
  • ಅಂಗಡಿ ಶಾಲೆಯಲ್ಲಿ ಸಂಗೀತ ಶಾಲೆ ಉದ್ಘಾಟನೆ
  • ಮಾಜಿ ಸಂಸದೆ ಮಂಗಲ ಅಂಗಡಿ ಉದ್ಘಾಟನೆ

ಸಂಗೀತವು ಮನಸ್ಸಿನ ಭಾವನೆ ವ್ಯಕ್ತ ಪಡಿಸುವ ಸಾಧನ
| ಮಾಜಿ ಸಂಸದೆ ಮಂಗಲ ಸುರೇಶ ಅಂಗಡಿ ಅಭಿಪ್ರಾಯ | ಸಂಗೀತ ಪ್ರಯೋಗಾಲಯ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಸಂಗೀತವು ಕೇವಲ ಶಬ್ದವಲ್ಲ, ಅದು ಭಾವನೆಗಳ ಪ್ರದರ್ಶನ, ಮನಸ್ಸಿನ ಸಂತೋಷ , ಪ್ರೀತಿ ಮತ್ತು ಶಾಂತಿಯನ್ನು ವ್ಯಕ್ತಪಡಿಸುವ ಸಾಧನ ಎಂದು ಮಾಜಿ ಸಂಸದೆ ಮಂಗಲ ಸುರೇಶ ಅಂಗಡಿ ಅಭಿಪ್ರಾಯಪಟ್ಟರು.
ನಗರದಲ್ಲಿ ಅಂಗಡಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಈಚೆಗೆ ಸಂಸ್ಥೆಯ ಸಂಸ್ಥಾಪಕ ದಿ.ಡಾ.ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸಂಗೀತ ಪ್ರಯೋಗಾಲಯ ಅವರು ಉದ್ಘಾಟಿಸಿದರು.
ಈ ಸಂಗೀತ ಪ್ರಯೋಗಾಲಯವು ಮಕ್ಕಳಲ್ಲಿ ಸಂಗೀತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಮುಂಬೈ ಸಂಸ್ಥೆಗೆ ಸಂಗೀತ ಸೇವೆ ಸಲ್ಲಿಸಿದೆ ಸಂಯೋಜಿಸಿದ್ದು, ಸಂಗೀತದ ಮೂಲಕ ವಿದ್ಯಾರ್ಥಿಗಳಲ್ಲಿ ತರಬೇತಿ, ಆತ್ಮವಿಶ್ವಾಸ ಮತ್ತು ಕಲಾತ್ಮಕ ಪ್ರತಿಭೆಗಳನ್ನು ಬೆಳೆಸುವ ಉದ್ದೇಶಗಳು ಸಂಗೀತ ಪ್ರಯೋಗಾಲಯವು ಮಹತ್ವದ ಹೆಜ್ಜೆಯಾಗಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರಾಂಶುಪಾಲೆ ಸಂಗೀತಾ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net