ಸಂಗೀತ ಬದುಕಿನ ಅವಿಭಾಜ್ಯ ಅಂಗ

ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಲಾ ವೈಭವ ಸಮಾರಂಭವನ್ನು ವೈದ್ಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಉದ್ಘಾಟಿಸಿದರು. ಲಿಂಗಾರೆಡ್ಡಿ ಶೇರಿ, ಮುಡಬಿ ಗುಂಡೇರಾವ
ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಲಾ ವೈಭವ ಸಮಾರಂಭವನ್ನು ವೈದ್ಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಉದ್ಘಾಟಿಸಿದರು. ಲಿಂಗಾರೆಡ್ಡಿ ಶೇರಿ, ಮುಡಬಿ ಗುಂಡೇರಾವ
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅನಿಸಿಕೆ
  • ಸೇಡಂನಲ್ಲಿ ಸಮಾರಂಭ
ಸೇಡಂ: ಸಂಗೀತ ಕೇವಲ ಮನರಂಜನೆಯ ಸಾಧನವಲ್ಲದೆ ಇದೀಗ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ವೈದ್ಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಹೇಳಿದರು.
ಶ್ರೀ ಕೊತ್ತಲ ಬಸವ ಸಭಾಭವನದಲ್ಲಿ ಸರಸ್ವತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸಂಗೀತ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ವ್ಯಕ್ತಿತ್ವ ವಿಕಸನಗೊಳಿಸುವ ಒಂದು ಶಕ್ತಿಯಾಗಿದೆ. ಸತತ ಪರಿಶ್ರಮದಿಂದ ಮಾತ್ರ ಸಂಗೀತ ವಿದ್ಯೆ ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಂಶೋಧಕ ಮುಡಬಿ ಗುಂಡೇರಾವ ಮಾತನಾಡಿ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ ಕಾಲದಿಂದಲೂ ಸೇಡಂ ಸಂಗೀತ, ಸಾಹಿತ್ಯ ಮತ್ತು ಸಂಸತಿಯ ಸಮೃದ್ಧ ಪರಂಪರೆ ಹೊಂದಿರುವ ಐತಿಹಾಸಿಕ ನೆಲೆಯಾಗಿದೆ. ನಮ್ಮ ನೆಲದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಸಂರಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ, ವಿಶ್ವ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ರವಿಂದ್ರಕುಮಾರ ಸಿಲಾರಕೊಟ, ಸಿಆರ್​ಪಿ ಹಂಪಯ್ಯ ವಿಶ್ವಕರ್ಮ, ಪುರಸಭೆ ಮಾಜಿ ಉಪಾಧ್ಯಕ್ಷ ಶಿವಾನಂದಸ್ವಾಮಿ, ಸಾಹಿತಿ ಸಂತೋಷಕುಮಾರ ತೊಟ್ಟಳ್ಳಿ, ಸಂಸ್ಥೆಯ ಅಧ್ಯಕ್ಷ ಮನೋಹರ ವಿಶ್ವಕರ್ಮ ಇತರರಿದ್ದರು.
ರೇವಣಸಿದ್ದಯ್ಯ ಹಿರೇಮಠ ಶಾಸಿಯ ಸಂಗೀತ, ಪ್ರತಿಮಾರೆಡ್ಡಿ ಬೆಂಗಳೂರು ಭಕ್ತೀಗಿತೆ ಗಾಯನ, ಗುರುಶಾಂತಯ್ಯ ಸ್ಥಾವರಮಠ ಸುಗಮ ಸಂಗೀತ, ಲಕ್ಷ್ಮಣ ಭಜಂತ್ರಿ ತತ್ವಪದ ಗಾಯನ ಹಾಗೂ ಈಶ್ವರ ವಾಲಿಕರ ವಚನ ಗಾಯನ ನಡೆಸಿಕೊಟ್ಟರು. ಶಂಕರ ರುದ್ರವಾಡಿ ಸಿತಾರ, ಪ್ರಶಾಂತ ಗೋಲ್ಡ್​ಸ್ಮಿತ್​ ಕೊಳಲು ನುಡಿಸಿದರು. ವಿರೇಶ ಭಂಟನಳ್ಳಿ, ವೀರಭದ್ರಯ್ಯ ಸ್ಥಾವರಮಠ, ಅಭಿಷೇಕ ವಿಶ್ವಕರ್ಮ, ಮಲ್ಲಿಕಾರ್ಜುನ ವಿಶ್ವಕರ್ಮ ತಬಲಾ ಸಾಥ್​ ನೀಡಿದರು.
ಮಲ್ಲಿಕಾರ್ಜುನ ಭಜಂತ್ರಿ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಶೀಶೈಲ್​ ವಿಶ್ವಕರ್ಮ ಸ್ವಾಗತಿಸಿದರು. ಬಸವರಾಜ ಬಾಳಿ ನಿರೂಪಣೆ ಮಾಡಿದರು. ಗುಂಡಪ್ಪ ಗುತ್ತೆದಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net