‘ಮ್ಯೂಸಿಕ್ ಫಾರ್ ಮೀಲ್ಸ್ ’ ಕಾರ್ಯಕ್ರಮ ಜ. 10ಕ್ಕೆ

ಇಸ್ಕಾನ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಇಳಯರಾಜ, ಅಕ್ಷಯ ಪಾತ್ರ ಫೌಂಡೇಶನ್‌ನ ಸಹ ಸ್ಥಾಪಕರು ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್, ಸಿಇಒ ಶ್ರೀಧರ್ ವೆಂಕಟ್ ಇದ್ದರು.
ಇಸ್ಕಾನ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಇಳಯರಾಜ, ಅಕ್ಷಯ ಪಾತ್ರ ಫೌಂಡೇಶನ್‌ನ ಸಹ ಸ್ಥಾಪಕರು ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್, ಸಿಇಒ ಶ್ರೀಧರ್ ವೆಂಕಟ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಐಇಸಿ ಕೇಂದ್ರದಲ್ಲಿ ಆಯೋಜನೆ
  • 16 ರಾಜ್ಯಗಳಲ್ಲಿ ಅಕ್ಷಯ ಪಾತ್ರ ಯೋಜನೆ
  • 23.30 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಆಹಾರ
ಬೆಂಗಳೂರು:
ಅಕ್ಷಯ ಪಾತ್ರ ಫೌಂಡೇಶನ್‌ನ ಬೆಳ್ಳಿಹಬ್ಬ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಅವರ ವೃತ್ತಿ ಬದುಕಿನ ಸುವರ್ಣ ಸಂಭ್ರಮದ ಅಂಗವಾಗಿ ಜ. 10ರಂದು ಸಂಜೆ 7ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ‘ಮ್ಯೂಸಿಕ್ ಫಾರ್ ಮೀಲ್ಸ್’ ಮತ್ತು ‘ಇಳಯರಾಜ 50: ದಂತಕತೆಯ ಸಂಗೀತ ಪಯಣ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ದೇಶದಲ್ಲಿ ಹಸಿವಿನ ಕಾರಣದಿಂದಾಗಿ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ದೂರದೃಷ್ಟಿಯೊಂದಿಗೆ 2000ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಅಕ್ಷಯ ಪಾತ್ರ ಯೋಜನೆ ಇಂದು 16 ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದೆ. 88 ಅಡುಗೆ ಮನೆಗಳ ಮೂಲಕ ನಿತ್ಯ 23.30 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಆಹಾರ ಒದಗಿಸುತ್ತಿದೆ. ಸರ್ಕಾರ, ಅನೇಕರ ಪಾಲುದಾರ ಸಾಮೂಹಿಕ ಸಹಕಾರದೊಂದಿಗೆ 25 ವರ್ಷಗಳ ಈ ಪಯಣ ಸಾಧ್ಯವಾಗಿದೆ. ಈ ಹಿನ್ನೆಲೆ ಇಳಯರಾಜ ಅವರ ಸಂಗೀತ ಸೇವೆಯೊಂದಿಗೆ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಫೌಂಡೇಶನ್‌ನ ಸಹ ಸ್ಥಾಪಕರು ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೌಂಡೇಶನ್‌ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, ಅಕ್ಷಯ ಪಾತ್ರ ಯೋಜನೆಯು ಪ್ರಸ್ತುತ 23,978 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 23 ಲಕ್ಷದ 30 ಸಾವಿರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಇದೇ ವೇಳೆ ಇಳಯರಾಜ ಅವರು ಐದು ದಶಕಗಳಲ್ಲಿ ತನ್ನ ಸಂಗೀತದ ಮೂಲಕ ಭಾಷೆ, ಭೌಗೋಳಿಕತೆ ಮತ್ತು ಶೈಲಿಗಳನ್ನು ಮೀರಿ ಜನರನ್ನು ಬೆಸೆಯುವ ಕಾರ್ಯ ನಡೆಸಿದ್ದಾರೆ. ಈ ವೇಳೆ ಉನ್ನತ ಉದ್ದೇಶ ಮತ್ತು ಸಾಂಸ್ಕೃತಿಕ ಘನತೆ ಎರಡನ್ನೂ ಸಂಯೋಜಿಸುವ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದರು.

ಕಳೆದ 50 ವರ್ಷಗಳಲ್ಲಿ ಸಂಗೀತವು ನನಗೆ ಎಲ್ಲವನ್ನೂ ಕೊಟ್ಟಿದೆ. ಆ ಸಂಗೀತದ ಮೂಲಕ ಈಗ ಮಕ್ಕಳಿಗೆ ಏನನ್ನಾದರೂ ನೀಡಬೇಕು ಎಂದೆನಿಸಿದೆ. ಅದಕ್ಕೆ ಅಕ್ಷಯ ಪಾತ್ರ ಸಂಸ್ಥೆಯು ‘ಮ್ಯೂಸಿಕ್ ಫಾರ್ ಮೀಲ್ಸ್’ ಸಂಗೀತ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದೆ. ಒಂದು ಸಂಗೀತ ಕಾರ್ಯಕ್ರಮವು ಖಾಲಿ ಹೊಟ್ಟೆಯಲ್ಲಿರುವ ಮಗುವಿನ ಹಸಿವು ನೀಗಿಸಿ ಉತ್ತಮ ಕಲಿಕೆಗೆ ಅನುವು ಮಾಡಿಕೊಡುವುದಾದರೆ ಆಗ ಪ್ರತೀ ರಾಗ ಮತ್ತು ಪ್ರತೀ ಲಯಕ್ಕೂ ಗಾಢವಾದ ಅರ್ಥ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net