ಮುರಗೋಡ ಪಿಕೆಪಿಎಸ್​ ಮಾದರಿ

ಮುರಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಮೃತ ಮಹೋತ್ಸವವನ್ನು ಅಥಣಿ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​, ನೀಲಕಂಠ ಸ್ವಾಮೀಜಿ, ದಿವಾಕರ ದೀತ ಸ್ವಾಮೀಜಿ, ಗೀತಾತಾಯಿ ದೇಸಾಯಿ, ಮಾಜಿ ಶಾಸಕ ವಿ.ಐ.ಪಾಟೀಲ ಇತರರಿದ್ದರು.
ಮುರಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಮೃತ ಮಹೋತ್ಸವವನ್ನು ಅಥಣಿ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​, ನೀಲಕಂಠ ಸ್ವಾಮೀಜಿ, ದಿವಾಕರ ದೀತ ಸ್ವಾಮೀಜಿ, ಗೀತಾತಾಯಿ ದೇಸಾಯಿ, ಮಾಜಿ ಶಾಸಕ ವಿ.ಐ.ಪಾಟೀಲ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮುರಗೋಡ
ಸಾಮಾಜಿಕ ರಂಗದಲ್ಲಿ ಅನೇಕ ಸವಾಲು ಎದುರಿಸಿ ರೈತರ ಪಾಲಿಗೆ ಕಲ್ಪವೃ ಕಾಮಧೇನುವಿನಂತೆ ನಿರಂತರವಾಗಿ ಶ್ರಮಿಸಿದ್ದರಿಂದ ಗೀತಾತಾಯಿ ದೇಸಾಯಿಗೆ ತಕ್ಕ ಪ್ರತಿಲ ಸಿಕ್ಕಿದೆ ಎಂದು ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಗ್ರಾಮದ ಎಪಿಎಂಸಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಸಂದ ಅಧ್ಯರಾಗಿ 25 ವರ್ಷ ಪೂರೈಸಿದ ಗೀತಾತಾಯಿ ದೇಸಾಯಿ ಅವರ ಬೆಳ್ಳಿಹಬ್ಬದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಶದ ಭವಿಷ್ಯ ಹಾಗೂ ಜನಸಾಮಾನ್ಯರ ಏಳಿಗೆಗೆ ಸಹಕಾರ ಸಂದ ಮೂಲಕ ದೇಸಾಯಿ ಮನೆತನ ಉತ್ತಮ ಸೇವೆ ನೀಡಿದ್ದಾರೆ. ಅವರ ಸಾಮಾಜಿಕ ಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮಹಾಂತ ಮಠದ ನೀಲಕಂಠ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹಾಗೂ ಕೆಂಗೇರಿ ಚಿದಂಬರ ಮಠದ ದಿವಾಕರ ದೀತ ಸ್ವಾಮೀಜಿ ಮಾತನಾಡಿದರು.
ಸಂಸದ ಜಗದೀಶ ಶೆಟ್ಟರ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ಮಹಾಂತೇಶ ದೊಡಗೌಡರ, ವಿರೂಪಾಕ್ಷ ಮಾಮನಿ ಹಾಗೂ ರಾಹುಲ ಜಾರಕಿಹೊಳಿ ಮಾತನಾಡಿ, ಸಹಕಾರಿ ರಂಗದಲ್ಲಿ 75 ವರ್ಷ ಪೂರೈಸಿದ ಮುರಗೋಡ ಪಿಕೆಪಿಎಸ್​ ಮಾದರಿಯಾಗಿದೆ. ಸಂದ ಅಭಿವೃದ್ಧಿಗೆ ದೇಸಾಯಿ ಮನೆತನದ ಸೇವೆ ಹಾಗೂ ಸಂಟನೆ ಅಪಾರ. ಕೇಂದ್ರ ಸಚಿವ ಅಮಿತ್​ ಷಾ ಸಹಕಾರಿ ಸಂದ ಉನ್ನತಿಗೆ ವಿವಿಧ ಸೌಲಭ್ಯ ಒದಗಿಸಿದ್ದಾರೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಸಿದ್ಧನಗೌಡರ ಹಾಗೂ ಕುಮಾರ ಪೂಜೇರಿ ಮಾತನಾಡಿ, ಮುರಗೋಡ ಪಿಕೆಪಿಎಸ್​ ಗೀತಾತಾಯಿ ದೇಸಾಯಿ ಅಧ್ಯಕ್ಷತೆಯಲ್ಲಿ ಪ್ರಸ್ತುತ 28.37 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 2,000ಕ್ಕೂ ರೈತ ಸದಸ್ಯರನ್ನು ಹೊಂದಿದ್ದು, 48.50 ಲ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಗೀತಾತಾಯಿ ದೇಸಾಯಿ 25 ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಪೂಜ್ಯರು, ಪಿಕೆಪಿಎಸ್​, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರು ಹಾಗೂ ಗಣ್ಯರು ಸನ್ಮಾನಿಸಿದರು. ಡಾ.ಅಜಿತ ದೇಸಾಯಿ, ದೇಮನಗೌಡ ಪಾಟೀಲ, ಬಸನಗೌಡ ಪಾಟೀಲ, ಕಾರ್ತಿಕ ಪಾಟೀಲ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ, ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಸ್ವಾಗತ ಸಮಿತಿ ಅಧ್ಯ ವಿ.ಬಿ.ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಂಕರ ಮಾಡಲಗಿ, ಮಹಾಂತೇಶ ತುರಮರಿ, ಮುಖಂಡ ಗುರು ಮೆಟಗುಡ್ಡ, ನಾಗರಾಜ ದೇಸಾಯಿ, ಪ್ರಕಾಶ ಮೊಗಬಸವ, ಮಹಾಂತೇಶ ಮತ್ತಿಕೊಪ್ಪ, ಸುರೇಶ ಮ್ಯಾಕಲ, ಈರಪ್ಪ ಕುರಬೇಟ, ಚಂದ್ರಪ್ಪ ಕಾರಜೋಳ, ಯಶವಂತಗೌಡ ಪಾಟೀಲ, ಮಹಾದೇವಿ ಹಿರೇಮಠ, ಸುನೀಲ ತಿವಾರಿ, ಯಲ್ಲಪ್ಪ ಬಂಡಗಿ, ಶಿವಾನಂದ ಕಟ್ಟಿಮನಿ, ಕುಮಾರ ಪೂಜೇರಿ. ಈರಣ್ಣ ಸಿದ್ದನಗೌಡರ, ಚಂದ್ರು ಕಾಳಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net