ಮುರಗೋಡ ಮಹಾಂತ ಶ್ರೀ ಜಾತ್ರೆ 20ರಿಂದ

ನೀಲಕಂಠ ಸ್ವಾಮೀಜಿ
ನೀಲಕಂಠ ಸ್ವಾಮೀಜಿ
Published on
ಮುರಗೋಡ: ಗ್ರಾಮದ ಮಹಾಂತ ದುರದುಂಡೀಶ್ವರ ಮಠದ ಸಭಾಭವನದಲ್ಲಿ ಲಿಂ.ಮಹಾಂತ ಶಿವಯೋಗಿಗಳ 54ನೇ ಪುಣ್ಯಸ್ಮರಣೆ ಅಂಗವಾಗಿ ನಡೆಯಲಿರುವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ಜರುಗಿತು. ನೀಲಕಂಠ ಸ್ವಾಮೀಜಿ ಮಾತನಾಡಿ, ೆ.20 ರಿಂದ ಐದು ದಿನಗಳ ಶರಣರ ಅನುಭಾವ ಪ್ರವಚನ, ೆ.25ರಿಂದ ರೈತ ಸಮಾವೇಶ, ಉದ್ಯೋಗ ಮೇಳ, ಭಜನಾ ಸ್ಪರ್ಧೆ, ಮಹಿಳಾ ಗೋಷ್ಠಿ, ಶರಣರ ಸಿದ್ಧಾಂತ ದರ್ಶನ ಹಾಗೂ ಮುರಗೋಡ ಮುಕುಟ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹ, ಮಹಾಪ್ರಸಾದ ವಿತರಣೆ ಹಾಗೂ ರಥೋತ್ಸವ ಜರುಗಲಿದೆ ಎಂದು ವಿವರಿಸಿದರು. ಅಂದಾಜು 2 ಕೋಟಿ ರೂ.ವೆಚ್ಚದಲ್ಲಿ ಗುರುಭವನ ನಿರ್ಮಿಸಲಾಗುತ್ತಿದ್ದು, ಹೆಚ್ಚಿನ ಹಣ ಸಂಗ್ರಹಿಸಿ ದೇಣಿಗೆ ನೀಡುವುದಾಗಿ ಭಕ್ತರು ತಿಳಿಸಿದರು. ಧರ್ಮದರ್ಶಿ ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ವಿಜಯ ಸಾಣಿಕೂಪ್ಪ, ಶಿವನಗೌಡ ಪಾಟೀಲ,
ಎಸ್​.ಟಿ.ಪಟ್ಟಣಶೆಟ್ಟಿ, ದುಂಡಪ್ಪ ಕಾರಿ, ಮಹಾಂತೇಶ ಗೌಡತಿ, ಪರಮೇಶ ತಟ್ಟಿಮನಿ, ಮಲ್ಲಯ್ಯ ಮಾಸಮರಡಿ, ಸುರೇಶ ಮ್ಯಾಕಲ, ಸಂಗಪ್ಪ ಬೆಳಗಾವಿ, ಪ್ರಕಾಶ ಕಾರಗಿ, ಮಹಾಂತೇಶ ಬೇಟದ, ಮಲ್ಲಪ್ಪ ಕುರಬೇಟ, ಸಂತೋಷ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net