ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ

ಪತಿಯನ್ನು ಕೊಲೆ ಮಾಡಿ ಪತ್ನಿ
ಪತಿಯನ್ನು ಕೊಲೆ ಮಾಡಿ ಪತ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಪತಿಯನ್ನು ಕೊಲೆ ಮಾಡಿದ ಪತ್ನಿ
  • ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಘಟನೆ
  • ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ
  • ಪ್ರಿಯಕರನ ಜತೆ ಸೇರಿ ಹತ್ಯೆ
ಪ್ರಿಯಕರ ಜೊತೆಗೆ ಪತಿಯನ್ನು ಕೊಲೆ ಮಾಡಿದ ಪತ್ನಿ!
ಚಿಕ್ಕೋಡಿ:

ಅನೈತಿಕ ಸಂಭಂದಕ್ಕೆ ಅಡ್ಡಿಯಾದ ಪತಿಯನ್ನು ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಖಡಕಲಾಟ ಗ್ರಾಮದಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಖಡಕಲಾಟ ಗ್ರಾಮದ ರಘು ಗವಾಡೆ(೪೦) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಬಂಗಾರಿ ಗಾವಡೆ ಹಾಗೂ ಬೆನ್ನಾಡಿ ಗ್ರಾಮದ ರಾಮಾ ರಾಣಗೆ ಆರೋಪಿಗಳಾಗಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಆರೋಪಿಗಳು ಕೊಲೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದರು, ಮೃತನ ತಾಯಿ ರಘುವನ್ನು ತೀರಿಸಿದರು. ಗಾವಡೆ ಬಾರದೇ ಇದ್ದಾಗ ಮೃತನ ಸಹೋದರ ಲಗಮಣ್ಣ ಗಾವಡೆ ಸಂಶಯಗೊಆಡು ಬಂಗಾರಿ ಗಾವಡೆ ವಿಚಾರಣೆ ನಡೆಸಿದ್ದಾರೆ. ಮೊದಲು ಕಬ್ಬು ಕಟಾವು ಕೆಲಸಕ್ಕೆ, ನಂತರ ಕುರಿ ಮೆಯಿಸಲು ಹೋಗಿದ್ದಾನೆ ಎಂದು ಹೇಳಿದ್ದಾರೆ, ಆದರೆ ಈ ಬಗ್ಗೆ ಮೃತನ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಾಗ ಕೊಲೆ ಮಾಡಿರುವ ಕುರಿತು ಒಪ್ಪಿಕೊಂಡಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಖಡಕಲಾಟ ಠಾಣೆ ಪೊಲೀಸ್ ರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net