ಪತ್ನಿಯಿಂದ ಮಾಜಿ ಸೈನಿಕನ ಕೊಲೆ ಪ್ರಕರಣ:ಪ್ರೀಯಕರನಿಂದ ವಿಡಿಯೋ ಬಿಡುಗಡೆ

ಕೊಲೆ ಪ್ರಕರಣ ಕುರಿತು ವಿಡಿಯೋ ಬಿಡುಗಡೆ ಮಾಡಿದ ಪ್ರೀಯಕರ
ಕೊಲೆ ಪ್ರಕರಣ ಕುರಿತು ವಿಡಿಯೋ ಬಿಡುಗಡೆ ಮಾಡಿದ ಪ್ರೀಯಕರ
Published on

ಪ್ರಮುಖ ಮುಖ್ಯಾಂಶಗಳು

  • ಪತ್ನಿಯಿಂದ ಮಾಜಿ ಸೈನಿಕನ ಕೊಲೆ ಪ್ರಕರಣ
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದ ಘಟನೆ
  • ಪ್ರಕರಣ ಕುರಿತು ಮಾಹಿತಿ ನೀಡಿದ ಪ್ರೀಯಕರ
  • ತಿಗಣೆ ಔಷಧಿ ತಂದು ಕೊಟ್ಟಿದ್ದು ನಾನೇ ಎಂದ ಪ್ರೀಯಕರ
ಮಾಜಿ ಸೈನಿಕನ ಕೊಲೆ ಶಂಕೆ ಪ್ರಕರಣ
| ತಿಗಣಿ ಔಷಧಿ ತಂದು ಕೊಟ್ಟದ್ದು ನಾನೇ ಎಂದ ಪ್ರಿಯಕರ
ಚಿಕ್ಕೋಡಿ : ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಈಚೆಗೆ ನಡೆದ ಪತ್ನಿಯಿಂದಲೇ ಮಾಜಿ ಸೈನಿಕ ಸಂದೀಪ ಮಂಜರಗಿ ಕೊಲೆ ಪ್ರಕರಣ ಆರೋಪಿ ಸುಮಾಳ ಪ್ರಿಯಕರ ಪುಂಡಲಿಕ ಡೊಂಬರ ವಿಡಿಯೋ ಬಿಡುಗಡೆ ಮಾಡಿ, ಕೊಲೆ ಶಂಕೆಯ ಪ್ರಕರಣ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಿಯಕರ ಪುಂಡಲಿಕ ಡೊಂಬರ ನಡೆಸುತ್ತಿದ್ದ ಎಗ್ ರೈಸ್ ಹೋಟೆಲ್ ನಲ್ಲಿ ಪರಿಚಯವಾದ ಮಾಜಿ ಸಂದೀಪ ಮಂಜರಗಿ ಹಾಗೂ ಸೈನಿಕನ ಪತ್ನಿ ಸುಮಾ ನಡುವೆ ಪರಸ್ಪರ ಸ್ನೇಹ ಬೆಳೆದಿತ್ತು.
ಸಂದೀಪ ಮಂಜರಗಿ ಮನೆಯಲ್ಲಿ ವಿಪರೀತ ಸಾರಾಯಿ ಸೇವಿಸುತ್ತಿದ್ದರು,ಸತ್ತರೇ ಸಾಯಲಿ ಎನ್ನುತ್ತಿದ್ದ ಪತ್ನಿ ಪತಿ ಎರಡು ಕೋಟಿ ರೂ.ವಿ ಪಾಲಿಸಿ ಮಾಡಿಸಿದ್ದರ ಬಗ್ಗೆ ,ಹಾಗೂ ಅವನು ಸತ್ತರೆ ನಾವಿಬ್ಬರೂ ಬೆಳಗಾವಿಯಲ್ಲಿ ಮನೆ ಮಾಡಿ ಇರೋಣ ಎಂದು ಸುಮಾ ಹೇಳಿದ್ದರಂತೆ.ಅಪಘಾತವಾದ ನಂತರ ಪತಿ ಆಸ್ಪತ್ರೆಯಲ್ಲಿರುವಾಗ ಸಂದೀಪ ಸಾವಿನ ಹಿಂದಿನ ದಿನ ಪ್ರೀಯಕರ ಪುಂಡಲಿಕನಿಗೆ ಕರೆ ಮಾಡಿ ಮನೆಯಲ್ಲಿ ತಿಗಣೆ ಹೆಚ್ಚಾಗಿ, ಅವನನ್ನು ಸಾಯಿಸಲು ಸಿಂಪಡನೆಗೆ ಔಷಧಿ ಬೇಕು ಎಂದಿದ್ದಳು. ಹಾಗಾಗೀ ತಿಗಣೆ ಔಷಧ ತಂದು ಕೊಟ್ಟಿದ್ದೆ, ಆದರೆ, ಅದರಲ್ಲಿ ನಂದೇನು ತಪ್ಪಿಲ್ಲ. ಸೈನಿಕನ ಸಾವಿನ ಬಗ್ಗೆ ತನಿಖೆಯಾಗಲಿ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಪ್ರೀಯಕರ ಪುಂಡಲಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net