ಬೆಂಕಿ ಕಡ್ಡಿ ಕೊಟ್ಟಿಲ್ಲವೆಂದು ಕೊಲೆ! / DODABALLAPUR

ಬಳಿಕ ತನಿಖೆಗಿಳಿದ ಇನ್​ಸ್ಪೆಕ್ಟರ್​ ಸಾದಿಕ್​ ಪಾಷ ಅವರ ನೇತೃತ್ವದಲ್ಲಿ ಸುನೀಲ್​ ಭಾಸಗಿ, ಸಚಿನ್​, ಪ್ರವಿಣ್​, ಫೈರೋಜ್​, ನಾರಾಯಣಸ್ವಾಮಿ, ಗಣಪತಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.
ಬಳಿಕ ತನಿಖೆಗಿಳಿದ ಇನ್​ಸ್ಪೆಕ್ಟರ್​ ಸಾದಿಕ್​ ಪಾಷ ಅವರ ನೇತೃತ್ವದಲ್ಲಿ ಸುನೀಲ್​ ಭಾಸಗಿ, ಸಚಿನ್​, ಪ್ರವಿಣ್​, ಫೈರೋಜ್​, ನಾರಾಯಣಸ್ವಾಮಿ, ಗಣಪತಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.
Published on
ದೊಡ್ಡಬಳ್ಳಾಪುರ : ವಿನಾಯಕ ನಗರದಲ್ಲಿ ಹೊಸ ವರ್ಷದಂದೇ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ನಿವಾಸಿಗಳಾದ ಉಜ್ವಲ್​ ಪ್ರಸಾದ್​ (29), ಸೂರಜ್​ ರಾಮ್​ (24), ಪ್ರಿನ್ಸ್​ (26) ಮತ್ತು ಕಾನೂನು ಸಂರ್ಷಕ್ಕೊಳಟ್ಟ ಶಾಲೆ ಬಿಟ್ಟ 17 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲರೂ ಕಾರ್ಖಾನೆ ಕಾರ್ಮಿಕರು ಮತ್ತು ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಒಡಿಶಾ ಮೂಲದ ಸುಮಂತ ಜಮೀಂದರ್​ (23) ಕೊಲೆಯಾದವ.
ಘಟನೆ ಹಿನ್ನೆಲೆ: ಬಾಶೆಟ್ಟ್ಟಿಹಳ್ಳಿಯ ವಿನಾಯಕ ನಗರದಲ್ಲಿ ಹೊಸ ವರ್ಷದಂದು ಸುಮಂತ ಜಮೀಂದರ್​ ಮತ್ತು ಸ್ನೇಹಿತ ನಿಖಿಲ್​ ಪಾರ್ಟಿ ಮಾಡಿ ಜ.1ರಂದು ರಾತ್ರಿ 12.30ರ ವೇಳೆಗೆ ಮನೆಯ ಕೆಳಗೆ ಬಂದಿದ್ದರು. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಆರೋಪಿತ ನಾಲ್ವರು ಬೆಂಕಿಕಡ್ಡಿ ಕೇಳಿದ್ದಾರೆ. ಇಲ್ಲ ಎಂದರೂ ಬಿಡದೆ ತಂದು ಕೊಡುವಂತೆ ಸುಮಂತ್​ಗೆ ಒತ್ತಾಯಿಸಿದ್ದರು. ಈ ವೇಳೆ ವಾಗ್ವಾದ ನಡೆದು ಸುಮಂತ್​ಗೆ ಆರೋಪಿಗಳು ಥಳಿಸಿದ್ದಾರೆ. ಸುಮಂತ್​ ಪ್ರಾಣ ಉಳಿಸಿಕೊಳ್ಳಲು ಮನೆಗೆ ಓಡಿಹೋಗಿದ್ದಾನೆ. ಆದರೂ, ಬಿಡದ ಆರೋಪಿಸಿಗಳು ಹಿಂಬಾಲಿಸಿ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ವೇಳೆ ಜತೆಯಲ್ಲಿದ್ದ ನಿಖಿಲ್​ ಗಾಬರಿಗೊಂಡು, ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದ ಮತ್ತೊಬ್ಬ ಸ್ನೇಹಿತನಿಗೆ ಗಲಾಟೆಯಲ್ಲಿ ಗಾಯವಾಗಿದೆ, ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಪತ್ತೆಯಾಗಿರಲಿಲ್ಲ. ಆದರೆ, ನೈಟ್​ ಶಿಫ್ಟ್​ ಮುಗಿಸಿಕೊಂಡು ಬಂದ ನಿಖಿಲ್​ ಸ್ನೇಹಿತನಿಗೆ ಸುಮಂತ್​ ಶವದ ರೂಪದಲ್ಲಿ ಪತ್ತೆಯಾಗಿದ್ದು, ಮಾಹಿತಿ ತಿಳಿದ ಸುಮಂತ್​ ಭಾವ ಇದು ಕೊಲೆಯೆಂದು ಶಂಕಿಸಿ ದೂರು ದಾಖಲಿಸಿದ್ದರು.
ಎಸ್​ಪಿ ಎಂ.ವಿ. ಚಂದ್ರಕಾಂತ್​, ಎಎಸ್​ಪಿ ವೆಂಕಟೇಶ್​ ಪ್ರಸನ್ನ, ನಾಗರಾಜು, ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಇನ್​ಸ್ಪೆಕ್ಟರ್​ ಸಾಧಿಕ್​ ಪಾಷಾ ಸ್ಥಳ ಪರಿಶೀಲಿಸಿ, ತನಿಖೆ ಆರಂಭಿಸಿದ್ದರು.
ಇದರ ನಡುವೆ, ನಿಖಿಲ್​ ಮೊಬೈಲ್​ ಸ್ವಿಚ್ಡ್​ಆಫ್​ ಮಾಡಿಕೊಂಡು ರೈಲು ಮೂಲಕ ಒಡಿಶಾ ಕಡೆ ಹೋಗಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡಿ ಪ್ರಕರಣದ ಮಾಹಿತಿ ನೀಡಿದ್ದಾನೆ. ಕೊಲೆ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು, ಹಾಗಾಗಿ ಭಯದಿಂದ ಊರಿಗೆ ಹೋಗಿದ್ದೆ ಎಂದು ನಿಖಿಲ್​ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.
ಬಳಿಕ ತನಿಖೆಗಿಳಿದ ಇನ್​ಸ್ಪೆಕ್ಟರ್​ ಸಾದಿಕ್​ ಪಾಷ ಅವರ ನೇತೃತ್ವದಲ್ಲಿ ಸುನೀಲ್​ ಭಾಸಗಿ, ಸಚಿನ್​, ಪ್ರವಿಣ್​, ಫೈರೋಜ್​, ನಾರಾಯಣಸ್ವಾಮಿ, ಗಣಪತಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net