ಕೊಲೆಯಾದ ಬಾಲಕಿ ಲಕ್ಷ್ಮೀ ರುದ್ರನ್ನವರ ಅಥಣಿ ತಾಲೂಕಿನ ಪಿ.ಕೆ ನಾಗನೂರ ನಿವಾಸಿಯಾಗಿದ್ದು, ಹಾಲಿ ಹಾರೂಗೇರಿಯಲ್ಲಿ ವಾಸವಾಗಿದ್ದರು. ಕೊಲೆಯಾದ ಅಪ್ರಾಪ್ತೆಯನ್ನು ಪ್ರೀತಿಸುವಂತೆ ಅಪರಾಧಿ ಪೀಡಿಸಿದ್ದು, ಲಕ್ಷ್ಮೀ ಆತನ ಪ್ರೀತಿ ನಿರಾಕರಿಸಿದ್ದಳು, ಇದರಿಂದ ಕೋಪಿತಗೊಂಡ ಅಪರಾಧಿ ಅಮೀರ ಜಮಾದಾರ ಬಾಲಕಿಯನ್ನು ಚಾಕುವಿನಿಂದ ಇರಿದು 2021 ರಲ್ಲಿ ಕೊಲೆ ಮಾಡಿದರ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖಾಧಿಕಾರಿ ರಾಘವೇಂದ್ರ ಖೋತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.