ಹರಾಜಿನಲ್ಲಿ ನಗರಸಭೆಗೆ 12.67 ಲಕ್ಷ ರೂ. ಆದಾಯ

Municipal Corporation earns Rs. 12.67 lakh in auction
Municipal Corporation earns Rs. 12.67 lakh in auction
Published on
ಶಿಡ್ಲಟ್ಟ: ಶಿಡ್ಲಟ್ಟದ ನಗರಸಭೆಗೆ ಸೇರಿದ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್​ಗಳ ನಿಲ್ದಾಣದ ಶುಲ್ಕ, ಒಳಚರಂಡಿ ಶುದ್ಧೀಕರಣ ಟಕದ ಶುಲ್ಕ, ಇವುಗಳ 2026&27ನೇ ಸಾಲಿನ ವಾರ್ಷಿಕ ವಸೂಲಾತಿ ಹಕ್ಕನ್ನು ಗುರುವಾರ ನಗರಸಭೆ ಸಮುದಾಯ ಭವನದಲ್ಲಿ ಬಹಿರಂಗ ಹರಾಜು ನಡೆಸಲಾಯಿತು.
ಸಂತೆ ಮಾರುಕಟ್ಟೆಯನ್ನು ನಗರದ ನವೀನ್​ಕುಮಾರ್​ ಹರಾಜನಲ್ಲಿ 3.91 ಲಕ್ಷ ರೂ.ಗೆ ಹರಾಜು ಕೂಗಿದರು. ದಿನವಹಿ ಮಾರುಕಟ್ಟೆಯನ್ನು ಅಂಬರೀಶ್​ 4.70 ಲಕ್ಷ ಸಾವಿರ ರೂ.ಗೆ ಮತ್ತು ಖಾಸಗಿ ಬಸ್​ ನಿಲ್ದಾಣದ ಶುಲ್ಕ ವಸೂಲಿಯನ್ನು ನರಸಿಂಹ 4.06 ಲಕ್ಷ ರೂ.ಗೆ ಹರಾಜು ಕೂಗಿದರು.
ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಮಾತನಾಡಿ, ಕಳೆದ ವರ್ಷ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್​ ನಿಲ್ದಾಣದ ಶುಲ್ಕ ಹರಾಜಿನಿಂದ 8.70 ಲಕ್ಷ ರೂ. ಆದಾಯ ಬಂದಿತ್ತು. ಈ ಬಾರಿ 12.67 ಲಕ್ಷ ರೂ. ಆದಾಯ ಬರುತ್ತಿದೆ. ಹಾಗಾಗಿ ಸುಮಾರು 4 ಲಕ್ಷ ರೂಗಳಷ್ಟು ಆದಾಯ ನಗರಸಭೆಗೆ ಹೆಚ್ಚಾಗಿದೆ. ಒಳಚರಂಡಿ ಶುದ್ಧೀಕರಣ ಟಕದ ಶುಲ್ಕದ ಮರು ಹರಾಜನ್ನು ಮತ್ತೊಮ್ಮೆ ಆನ್​ಲೈನ್​ ಮೂಲಕ ಟೆಂಡರ್​ ಕರೆಯುತ್ತೇವೆ ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ನಾಗರಾಜ್​, ಅತೀಕ್​, ಮುನಿಕೃಷ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net