ಬೆಂಗಳೂರು: ಕಟ್ಟಿದ ಮನೆ ಅಂದವಾಗಿ ಕಾಣಬೇಕು, ಮನಸ್ಸಿಗೆ ಮುದ ನೀಡಬೇಕು, ನೋಡುಗರ ಮನ ಸೆಳೆಯಬೇಕು. ಇದೆಲ್ಲ ಸಾಧ್ಯವಾಗುವುದು ಸುಂದರವಾದ ಅಂಗಳದಿಂದ. ದೊಡ್ಡ ಮತ್ತು ಒಳಂಗಣ ಆಕರ್ಷಕವಾಗಿ ಕಂಡರೆ ಸಾಲದು. ಅದರ ಜತೆಗೆ ಹೊರಾಂಗಣವೂ ಅಂದವಾಗಿರಬೇಕು. ಮನೆ ಸುತ್ತ ಖಾಲಿ ಜಾಗ ಇದ್ದರಂತೂ ನಿಮ್ಮ ಅಭಿರುಚಿಗೆ ತಕ್ಕಂತೆ ಸುಂದರ ರೂಪ ನೀಡಬಹುದು. ಆ ಜಾಗದಲ್ಲಿ ಕೈತೋಟ ನಿರ್ಮಿಸಿದರೆ ಮನೆಯ ಸೊಬಗು ಇಮ್ಮಡಿಗೊಳ್ಳುವುದು. ಅದರಲ್ಲೂ ಬೇಸಿಗೆಯಲ್ಲಿ ಇದರಿಂದ ಬಹಳ ಉಪಯೋಗ ಆಗಲಿದ್ದು, ತಂಪಾದ ಅನುಭವ ನೀಡಲಿದೆ.