ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ತಾವು ನೀಡಿದ ಮಹತ್ವದ ತೀರ್ಪು ಸ್ಮರಿಸಿದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್, ಲೇಖಕರ ಪಾಂಡಿತ್ಯವನ್ನು ಶ್ಲಾಘಿಸಿದರು. ನರವೈಜ್ಞಾನಿಕ ವಿಕಲಾಂಗತೆಗಳ ಸಂಕೀರ್ಣತೆಯ ತಿಳಿದುಕೊಳ್ಳಲು ನ್ಯಾಯಾಧೀಶರಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ನ್ಯೂರೋ ಸರ್ಜನ್ ಡಾ.ಶರಣ್ ಶ್ರೀನಿವಾಸನ್, ಡಾ.ಪ್ರತಿಭಾ ಶರಣ್ ಮತ್ತಿತರರಿದ್ದರು.