ಎಂ.ಆರ್.ಮಂಜುನಾಥ್ ಕಾಫಿ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ

ಸಕಲೇಶಪುರದಲ್ಲಿ ಆಯೋಜಿಸಿದ್ದ  ಕಾಫಿ ಬೆಳೆಗಾರರ ಸಮಾವೇಶದಲ್ಲಿ ಎಂ.ಆರ್.ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಾರಾಯಣ ನಾಗರಾಜು, ಬಿ.ಜೆ. ಕಾಂತರಾಜು ಇತರರಿದ್ದರು.
ಸಕಲೇಶಪುರದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಎಂ.ಆರ್.ಮಂಜುನಾಥ್ ಅವರನ್ನು ಗೌರವಿಸಲಾಯಿತು. ನಾರಾಯಣ ನಾಗರಾಜು, ಬಿ.ಜೆ. ಕಾಂತರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮದಲಾಪುರ ಗ್ರಾಮದ ಕಾಫಿ ಬೆಳೆಗಾರ ಎಂ.ಆರ್.ಮಂಜುನಾಥ್
  • ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ
ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಕಾಫಿ ಬೆಳೆಗಾರ ಎಂ.ಆರ್.ಮಂಜುನಾಥ್ ಅವರನ್ನು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಕಲೇಶಪುರದಲ್ಲಿ ಗುರುವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಮಂಜುನಾಥ್ ಅವರನ್ನು ಜಿಲ್ಲಾ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಬಳಿಕ ಸಂಜೆ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಜಿಲ್ಲಾ ಸಂಘದ ಅಧ್ಯಕ್ಷ ಮಂಜುನಾಥಶೆಟ್ಟಿ, ಉಪಾಧ್ಯಕ್ಷ ಸಚಿನ್, ಕಾರ್ಯದರ್ಶಿ ಪುಟ್ಟರಾಜು, ಅರಕಲಗೂಡು ತಾಲೂಕು ಸಂಘದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ನಿರ್ದೇಶಕರಾದ ಬಿ.ಜೆ. ಕಾಂತರಾಜು, ಅರುಣಕುಮಾರ್, ನಾರಾಯಣ, ನಾಗರಾಜು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.
23ಎಆರ್‌ಕೆ4..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net